ಕೂಡಿಗೆ, ಜು. ೩೧: ಇಲ್ಲಿನ ಕೃಷಿ ತರಬೇತಿ ಕೇಂದ್ರದಲ್ಲಿ ಕೃಷಿ ಇಲಾಖೆಯ ಜಮೀನಿನಲ್ಲಿ ಬೀಜೋತ್ಪಾದನೆಗೆ ಸಂಬAಧಿಸಿದ ತುಂಗ ಭತ್ತದ ನಾಟಿ ಕಾರ್ಯ ಆರಂಭಗೊAಡಿದೆ.
ಹಾರAಗಿ ನದಿ ದಂಡೆಯಲ್ಲಿರುವ ೨೦ ಎಕರೆ ಪ್ರದೇಶದಲ್ಲಿ ಈ ಸಾಲಿನ ಭತ್ತದ ನಾಟಿ ಕೆಲಸವೂ ಆರಂಭಗೊAಡಿದೆ. ವರ್ಷಂಪ್ರತಿಯAತೆ ಈ ಸಾಲಿನಲ್ಲಿ ತುಂಗ ಭತ್ತದ ಬಿತ್ತನೆ ಬೀಜದ ಸಸಿಮಡಿಗಳನ್ನು ಮೊದಲು ಸಿದ್ಧತೆ ಮಾಡಿ ೨೦ ದಿನಗಳ ನಂತರ ಉಳುಮೆ ಮಾಡಿದ ಗದ್ದೆಗಳಲ್ಲಿ ಭತ್ತದ ನಾಟಿ ಕಾರ್ಯವನ್ನು ಆರಂಭಿಸಲಾಗಿದೆ.