ಸೋಮವಾರಪೇಟೆ, ಜು. ೩೧: ಸಮೀಪದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆಯಿಂದ ಮನೆಗೆ ಹಾನಿಯಾದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುವಿಗಳಿಗೆ ಟಾರ್ಪಲ್ ವಿತರಿಸಲಾಯಿತು. ಅಧ್ಯಕ್ಷ ಗೋಪಾಲಕೃಷ್ಣ, ಉಪಾಧ್ಯಕ್ಷೆ ರಶೀದಾ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸ್ಮಿತಾ ಅವರುಗಳು ಫಲಾನುಭವಿಗಳಿಗೆ ಟಾರ್ಪಲ್ ವಿತರಿಸಿದರು. ಇದೇ ಸಂದರ್ಭ ಗ್ರಾಮ ಪಂಚಾಯಿತಿಯ ಶೇ. ೨೫ರ ಅನುದಾನದಲ್ಲಿ ಹೆಚ್.ಆರ್. ರಾಜು ಅವರ ಪುತ್ರನ ಶವಸಂಸ್ಕಾರದ ಸಹಾಯಧನ ರೂ. ೫ ಸಾವಿರ ವಿತರಿಸಲಾಯಿತು. ಈ ಸಂದರ್ಭ ಸದಸ್ಯರುಗಳಾದ ಪ್ರಮೀಳಾ, ಶಂಕರ್, ಅನುಕುಮಾರ್, ರುದ್ರಪ್ಪ, ವೀಣಾ, ಭಾಗ್ಯ ಉಪಸ್ಥಿತರಿದ್ದರು