ಸಿದ್ದಾಪುರ, ಜು. ೩೧: ವೀರಾಜ ಪೇಟೆ ವಲಯ ವ್ಯಾಪ್ತಿಯ ಮರಂ ದೋಡ, ನರಿಯಂದಡ, ಚೇಲಾವರ, ಕೋಕೇರಿ ಹಾಗೂ ಕರಡ ಗ್ರಾಮಗಳಲ್ಲಿಯ ಖಾಸಗಿ ಜಮೀನುಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಮಾಕುಟ್ಟ ಅರಣ್ಯ ಪ್ರದೇಶಕ್ಕೆ (ಕಬ್ಬೆಬೆಟ್ಟದ ಮುಖಾಂತರ ಪದಿನಾಲ್ಕುನಾಡು ಹಾಗೂ ಕೆರಟಿ ಅರಣ್ಯ ಪ್ರದೇಶ) ಓಡಿಸುವ ಕಾರ್ಯಾಚರಣೆ ಯನ್ನು ತಾ. ೧ ಮತ್ತು ೨ ರಂದು ಬೆಳಿಗ್ಗೆ ೯ ಗಂಟೆಯಿAದ ಸಂಜೆ ೬.೩೦ ರವರೆಗೆ ನಡೆಯಲಿದೆ. ಈ ಗ್ರಾಮಗಳ ತೋಟಗಳ ಮಾಲೀಕರು, ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಜಾಗೃತೆ ವಹಿಸಿ ಎಚ್ಚರಿಕೆಯಿಂದ ಇರಬೇಕೆಂದು ಹಾಗೂ ಇಲಾಖೆ ಯೊಂದಿಗೆ ಸಹಕರಿಸಬೇಕೆಂದು ವೀರಾಜಪೇಟೆ ವಲಯ ಅರಣ್ಯಾಧಿಕಾರಿ ಕೋರಿದ್ದಾರೆ.