ಕುಶಾಲನಗರ, ಜು. ೩೧: ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಗ್ರಾಪಂ ಅಧ್ಯಕ್ಷೆ ಸೌಮ್ಯ ಭರತ್ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಕಾವೇರಿ ನದಿಗೆ ಕಲುಷಿತ ನೀರು ಹರಿಸುತ್ತಿರುವ ನದಿ ತಟಗಳಲ್ಲಿ ನಿರ್ಮಾಣಗೊಂಡಿರುವ ಹೊಟೇಲ್, ಬಾರ್‌ಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸದಸ್ಯ ಶಿವಪ್ಪ ಒತ್ತಾಯಿಸಿದರು. ಹಲವು ಬಾರಿ ಈ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರೂ ಇದುವರೆಗೆ ಕ್ರಮವಹಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಧ್ವನಿಗೂಡಿಸಿದ ಇತರೆ ಸದಸ್ಯರುಗಳು ನದಿ ಕಲುಷಿತ ಗೊಳಿಸುತ್ತಿರುವವರÀ ವಿರುದ್ಧ ಕೂಡಲೇ ಸೂಕ್ತ ಕ್ರಮವಹಿಸಲು ಅಧ್ಯಕ್ಷೆ ಸೌಮ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.

ಅಂತಹವರ ವಿರುದ್ಧ ಪ್ರಕರಣ ದಾಖಲಿಸಲು ಕ್ರಮವಹಿಸುವುದಾಗಿ ಪಿಡಿಓ ಸುಮೇಶ್ ಸಭೆಗೆ ತಿಳಿಸಿದರು.

ಕಂದಾಯ, ತೆರಿಗೆ ವಸೂಲಾತಿ ಕಾರ್ಯ ಕಾಲಕಾಲಕ್ಕೆ ಸಮರ್ಪಕವಾಗಿ ಕೈಗೊಳ್ಳುವಂತೆ ಸದಸ್ಯ ಪ್ರದೀಪ್ ಸಭೆಯನ್ನು ಆಗ್ರಹಿಸಿದರು. ಗ್ರಾ.ಪಂ.ನಲ್ಲಿ ಒಬ್ಬನೇ ಪೌರಕಾರ್ಮಿಕ ಇರುವ ಕಾರಣ ಸ್ವಚ್ಛತಾ ಕಾರ್ಯ ಕುಂಠಿತಗೊAಡಿದೆ. ಹೆಚ್ಚುವರಿ ಪೌರಕಾರ್ಮಿಕರನ್ನು ನೇಮಿಸಿಕೊಳ್ಳಿ ಅಥವಾ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಶೀಘ್ರದಲ್ಲೇ ಕ್ರಮವಹಿಸಬೇಕಿದೆ ಎಂದು ಸದಸ್ಯರಾದ ಪ್ರದೀಪ್, ಶಿವಪ್ಪ, ರುಕ್ಮಿಣಿ, ಉಷಾ ಚಿದಾನಂದ ಅವರು ಒತ್ತಾಯಿಸಿದರು. ತ್ಯಾಜ್ಯ ನಿರ್ವಹಣೆ ವಿಚಾರದ ಕುರಿತು ಗಂಭೀರ ಚರ್ಚೆ ನಡೆಯಿತು. ಗ್ರಾ.ಪಂ. ವ್ಯಾಪ್ತಿಯ ಅಂಗಡಿ, ಮಳಿಗೆಗಳಲ್ಲಿ ಸರಕಾರದ ಮಾನ ದಂಡದAತೆ ಕನ್ನಡ ಭಾಷೆೆ ಕಡ್ಡಾಯ ಬಳಕೆ, ಪರವಾನಗಿ ನವೀಕರಣ, ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸುವುದು, ಜಮಾ ಖರ್ಚುಗಳ ಕುರಿತು ಚರ್ಚೆಗಳು ನಡೆದವು. ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಪ್ರವೀಣ್ ಕುಮಾರ್ ಎಂ.ಕೆ. ಸೇರಿದಂತೆ ಸದಸ್ಯರುಗಳು ಇದ್ದರು.