ವೀರಾಜಪೇಟೆ, ಜು. ೩೧: ಕಾವೇರಿ ನದಿಯ ತಟದ ಬಿದಿರಿನ ಪೊದೆಗೆ ಸಿಲುಕಿಕೊಂಡ ಸ್ಥಿತಿಯಲ್ಲಿ ಅನಾಮಧೇಯ ಪುರುಷನ ರುಂಡವಿಲ್ಲದ ಮೃತದೇಹ ಪತ್ತೆಯಾಗಿದೆ.
ವೀರಾಜಪೇಟೆ ತಾಲೂಕಿನ ಬೇತ್ರಿ ಕಾವೇರಿ ನದಿಯ ತಟದಲ್ಲಿ ಪುರುಷನ ರುಂಡ ಇಲ್ಲದ ಮೃತದೇಹ ಪತ್ತೆಯಾಗಿದೆ. ಸ್ಥಳೀಯ ನಿವಾಸಿಯೊಬ್ಬರು ನದಿ ತಟಕ್ಕೆ ತೆರಳಿದ್ದು ದುರ್ವಾಸನೆ ಬೀರುವುದನ್ನು ಮನಗಂಡಿದ್ದಾರೆ. ಸ್ಥಳಕ್ಕೆ ತೆರಳಿ ನೋಡಿದಲ್ಲಿ ಪುರುಷನ ಮೃತದೇಹ ಪತ್ತೆಯಾಗಿದೆ. ವಿಷಯ ತಿಳಿದು ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ವಾಣಿಶ್ರಿ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದ್ದಾರೆ. ಮಡಿಕೇರಿಯ ಮುಳುಗು ತಜ್ಞ ಮತ್ತಪ್ಪ ಅವರÀ ಸಹಾಯದಿಂದ ಮೃತದೇಹ ಹೊರತೆಗೆಯುವಲ್ಲಿ ಸಫಲರಾಗಿದ್ದಾರೆ. ಮೃತದೇಹವು ಸಂಪೂರ್ಣ ಕೊಳೆÀತ ಸ್ಥಿತಿಯಲ್ಲಿದ್ದು ರುಂಡ ಶರೀರದಿಂದ ಬೇರ್ಪಟ್ಟಿದೆ. ದೇಹದಲ್ಲಿ ಕೆಂಪು ಬಣ್ಣದ ಮೇಲಂಗಿ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಇದೆ. ಪ್ರಾಯ ಸುಮಾರು ೩೫-೪೦ ವರ್ಷ ಎಂದು ಅಂದಾಜಿಸಲಾಗಿದೆ. ಮೃತದೇಹವನ್ನು ಮಡಿಕೇರಿ ಸರ್ಕಾರಿ ಆಸ್ಪತ್ರೆಯ ಶÀವಾಗಾರದಲ್ಲಿರಿಸಲಾಗಿದೆ. ಮೃತರ ಬಗ್ಗೆ ಮಾಹಿತಿ ದೊರತಲ್ಲಿ ಸ್ಥಳೀಯ ಪೊಲೀಸ್ ಠಾಣೆಯ ೯೪೮೦೮೦೪೯೫೬ ಮತ್ತು ೯೪೮೦೮೦೪೯೫೨ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸುವAತೆ ಆರಕ್ಷಕ ಇಲಾಖೆ ಮನವಿ ಮಾಡಿದೆ.