ಗುಡ್ಡೆಹೊಸೂರು, ಜು. ೩೧: ಗಾಳಿ ಸಹಿತ ಭಾರೀ ಮಳೆಗೆ ಮನೆಯೊಂದು ಕುಸಿದು ಬಿದ್ದ ಘಟನೆ ಇಲ್ಲಿಗೆ ಸಮೀಪದ ದೊಡ್ಡಬೆಟ್ಟಗೇರಿ ಗ್ರಾಮದ ಸೋಲಿಗರ ಕಾಲೋನಿಯಲ್ಲಿ ನಡೆದಿದೆ.

ಅಶೋಕ ಹಾಗೂ ಪಾರ್ವತಿ ಅವರಿಗೆ ಸೇರಿದ ಮನೆಯ ಒಂದು ಭಾಗದ ಗೋಡೆ ಸಂಪೂರ್ಣ ಕುಸಿದಿದೆ. ಪಾರ್ವತಿ ಅವರು ಅನಾರೋಗ್ಯ ಪೀಡಿತರಾಗಿದ್ದು, ಕುಟುಂಬ ಮತ್ತಷ್ಟು ಸಮಸ್ಯೆಗೆ ತುತ್ತಾಗಿದೆ.

ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯಿAದ ಪ್ಲಾಸ್ಟಿಕ್ ಟಾರ್ಪಲ್ ಒದಗಿಸಿದ್ದು, ಮತ್ತಷ್ಟು ಪರಿಹಾರದ ಅವಶ್ಯಕತೆ ಇದೆ ಎಂದು ಅಶೋಕ್ ಅವರು ತಿಳಿಸಿದ್ದಾರೆ.