*ಗೋಣಿಕೊಪ್ಪ, ಜು. ೩೧: ಜೆಸಿಐ ಪೊನ್ನಂಪೇಟೆ ನಿಸರ್ಗದ ೧೪ನೇ ಅಧ್ಯಕ್ಷರಾಗಿ ತೀತಮಾಡ ನಿತಿನ್ ಆಯ್ಕೆಯಾಗಿದ್ದಾರೆ. ಕುಂದ, ಈಚೂರು ಖಾಸಗಿ ರೆಸಾರ್ಟ್ನಲ್ಲಿ ನಡೆದ ಸಮಾರಂಭದಲ್ಲಿ ಈ ಆಯ್ಕೆ ನಡೆಯಿತು.

ಕಾರ್ಯದರ್ಶಿಯಾಗಿ ತೀತಮಾಡ ಸುಜಿತ್, ಖಜಾಂಚಿಯಾಗಿ ಚಂಗಪ್ಪ ಬಿ.ಎಂ., ಸೋಮಣ್ಣ ಮತ್ತು ನಿರ್ದೇಶಕರುಗಳಾದ ದಿನೇಶ್ ಎ.ಪಿ., ತನು ತಿಮ್ಮಯ್ಯ, ನೀತು ಅಯ್ಯಪ್ಪ, ೨೦೨೫-೨೬ ಸಾಲಿನ ಆಡಳಿತ ಮಂಡಳಿಗೆ ಆಯ್ಕೆ ನಡೆಯಿತು. ಪದಗ್ರಹಣ ಕಾರ್ಯಕ್ರದಲ್ಲಿ ನಿಕಟಪೂರ್ವ ಅಧ್ಯಕ್ಷ ಮಂಜು ಬೋಪಣ್ಣ ಪೆಮ್ಮಂಡ, ಪದಗ್ರಹಣ ಆಫೀಸರ್ ದಿಲನ್ ಚಂಗಪ್ಪ ಪಿ.ಎಂ. ಸೇರಿದಂತೆ ಸದಸ್ಯರುಗಳು ಇದ್ದರು.