ಕೊಡ್ಲಿಪೇಟೆ, ಜು. ೩೧: ಇಲ್ಲಿನ ಹೇಮಾವತಿ ರೋಟರಿ ಕೊಡ್ಲಿಪೇಟೆಯ ೨೦೨೫-೨೬ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸ್ಥಳೀಯ ಡಾ. ಉದಯ್ ಕಂಫರ್ಟ್ ಸಭಾಂಗಣದಲ್ಲಿ ನಡೆಯಿತು.
ಹೇಮಾವತಿ ರೋಟರಿ ಅಧ್ಯಕ್ಷ ಮಾದವ್ ಲಾಲ್ ಅಧ್ಯಕ್ಷತೆಯಲ್ಲಿ ಪದಗ್ರಹಣ ಕಾರ್ಯಕ್ರಮ ನಡೆ ಯಿತು. ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿ ಮಾತ ನಾಡಿದ ಹಿರಿಯ ರೊಟೇರಿಯನ್ ನಾಗೇಶ್ ಅವರು ಮಾತನಾಡಿ, ರೋಟರಿ ಸಂಸ್ಥೆಯು ನಿಸ್ವಾರ್ಥ ಸೇವೆಗೆ ಹೆಸರಾಗಿದೆ. ನಮ್ಮ ದುಡಿಮೆಯ ಒಂದಿಷ್ಟು ಭಾಗವನ್ನು ಸಮಾಜ ಸೇವೆಗೆ ನೀಡುವ ಮೂಲಕ ಸಾರ್ಥಕ ಜೀವನ ನಡೆಸಬೇಕು ಎಂದರು. ರೋಟರಿ ಅಂತರರಾಷ್ಟಿçÃಯ ಸಮಿತಿ ಈ ಬಾರಿ ‘ಯುನೈಟ್ ಫಾರ್ ಗುಡ್’ ಎಂಬ ಧ್ಯೇಯವಾಕ್ಯವನ್ನು ಅಳವಡಿಸಿ ಕೊಂಡು ಕಾರ್ಯನಿರ್ವಹಿಸುತ್ತಿದೆ. ನಾನು ಎನ್ನುವುದಕ್ಕಿಂತ ನಾವು ಎಂದು ತಂಡವಾಗಿ ಕಾರ್ಯಾಚರಿಸಿ ದರೆ ಯಶಸ್ಸು ಸಾಧ್ಯ ಎಂದರು.
ಮುಖ್ಯ ಅಥಿತಿಯಾಗಿದ್ದ ರೋಟರಿ ಜಿಲ್ಲಾ ಉಪರಾಜ್ಯಪಾಲ ಉಲ್ಲಾಸ್ ಕೃಷ್ಣ ಮಾತನಾಡಿ, ರೋಟರಿ ಹೇಮಾವತಿ ಸಮಿತಿಯು ಗೋಲ್ಡನ್ ಅವಾರ್ಡ್ ಪಡೆದು ಕೊಂಡಿದೆ. ಮುಂದಿನ ಸಾಲಿನ ಸಮಿತಿಯೂ ಸಹ ಉತ್ತಮವಾದ ಸಾಮಾಜಿಕ ಸೇವಾ ಚಟುವಟಿಕೆ ಗಳನ್ನು ಮಾಡುವ ಮೂಲಕ ಪ್ಲಾಟಿನಂ ಮತ್ತು ಡೈಮಂಡ್ ಅವಾರ್ಡ್ ಗಳಿಸುವಂತಾಗಲಿ ಎಂದು ಹಾರೈಸಿದರು. ನೂತನ ಸಾಲಿನ ಅಧ್ಯಕ್ಷರಾಗಿ ಉಮೇಶ್ ಯು.ಹೆಚ್., ಕಾರ್ಯದರ್ಶಿಯಾಗಿ ಗಣೇಶ್ ಚೌದರಿ ಮತ್ತು ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಕೊಡ್ಲಿಪೇಟೆ ಗ್ರಾ.ಪಂ. ಸದಸ್ಯ ಶೋಭಿತ್ ಗೌಡ ನೂತನ ಸದಸ್ಯರಾಗಿ ಸೇರ್ಪಡೆ ಗೊಂಡರು. ಕಾರ್ಯದರ್ಶಿ ಸಾಗರ್, ಶ್ರುತಿ ಕಾರ್ಯಕ್ರಮ ನಿರ್ವಹಿಸಿದರು. ವಲಯಮಟ್ಟದ ಕ್ರಿಕೆಟ್ ಪಂದ್ಯಾವಳಿ ಯಲ್ಲಿ ಪ್ರಥಮ ಸ್ಥಾನ ಪಡೆದ ದುಷ್ಯಂತ್ ನಾಯಕತ್ವದ ತಂಡವನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿದ್ದ ರೋಟರಿ ವಲಯ ಸೇನಾನಿ ರಾಮಣ್ಣ, ಪ್ರಮುಖರಾದ ಡಾ. ಉದಯ್‌ಕುಮಾರ್, ಉಪಾಧ್ಯಕ್ಷ ಭಾನುಪ್ರಕಾಶ್, ಖಜಾಂಚಿ ಅಮೃತ್‌ಕುಮಾರ್, ಮಾಜಿ ಅಧ್ಯಕ್ಷರುಗಳಾದ ಹೆಚ್. ಎಂ. ದಿವಾಕರ್, ಡಿ. ವಿ. ದಿನೇಶ್, ಹೆಚ್. ಜೆ. ಪ್ರವೀಣ್, ಬಿ. ಕೆ. ಯತೀಶ್ ಸೇರಿದಂತೆ ಇತರರು ಇದ್ದರು.