ವೀರಾಜಪೇಟೆ, ಜು. ೩೧: ಬಸವ ವಸತಿ ಹಾಗೂ ಡಾ, ಬಿ.ಆರ್. ಅಂಬೇಡ್ಕರ್ ಗ್ರಾಮೀಣ ಭಾಗದ ಹೆಚ್ಚುವರಿ ಯೋಜನೆಯಡಿ ಮನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಉಳಿದ ಫಲಾನುಭವಿಗಳಿಗೆ ಮುಂದಿನ ಸಾಲಿನಲ್ಲಿ ಆಧ್ಯತೆ ನೀಡಲಾಗುವುದು ಎಂದು ಬೇಟೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಚ್ಚಪಂಡ ಎಂ.ಬೋಪಣ್ಣ ಹೇಳಿದರು.

ವೀರಾಜಪೇಟೆ ಬಳಿಯ ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುದುಪಾಡಿ ಶ್ರೀ ಅಯ್ಯಪ್ಪ ದೇವಸ್ಥಾನದ ಸಭಾಂಗಣದಲ್ಲಿ ನಡೆದ ವಸತಿ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ವಿಶೇಷ ಗ್ರಾಮಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿವೇಶನ ಇಲ್ಲದವರಿಗೆ ಮನೆ ಹಂಚಿಕೆ ನಡೆಸಲಾಗುತ್ತಿದೆ. ಬೇಟೋಳಿ ಪಂಚಾಯಿತಿ ವ್ಯಾಪ್ತಿಗೆ ಒಟ್ಟು ೩೧ ಮನೆಗಳು ಮಂಜೂರಾಗಿವೆ. ಮೀಸಲಾತಿಯಂತೆ ಪರಿಶಿಷ್ಟ ಜಾತಿ, ಪಂಗಡ ವರ್ಗಕ್ಕೆ ಸೇರಿದವರಿಗೆ ಹಂಚಿ, ಇತರ ಸಮುದಾಯದವರಿಗೆ ಇನ್ನು ೭ ಮನೆಗಳು ಬಾಕಿ ಇರುವುದಾಗಿ ತಿಳಿಸಿದರು. ವಿಶೇಷ ಗ್ರಾಮ ಸಭೆಗೆ ನೋಡೆÀಲ್ ಅಧಿಕಾರಿಯಾಗಿ ಶಿಕ್ಷಣ ಸಂಯೋಜಕ ಬಿ.ಎಸ್. ರಂಗಸ್ವಾಮಿ ಮಾತನಾಡಿ, ಸರಕಾರದ ಯೋಜನೆಗಳು ಪ್ರತಿಯೊಬ್ಬರಿಗು ತಲುಪುವಂತಾಗಬೇಕು, ನಿವೇಶನ ರೈತರು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳು ವಂತಾಗಬೇಕು ಎಂದರು. ಈ ಸಂದರ್ಭ ಗ್ರಾಮಸ್ಥ ಎ. ಎಂ. ಹರೀಶ್ ಮಾತನಾಡಿ, ಹೆಗ್ಗಳ ಗ್ರಾಮದಲ್ಲಿ ಅನೇಕರಿಗೆ ನಿವೇಶನಗಳಿಲ್ಲ. ಇನ್ನು ಮನೆಗಳನ್ನು ಸರಕಾರ ಪಂಚಾಯಿತಿ ಮೂಲಕ ದೊರಕಿಸಬೇಕು ಎಂದರು. ಈ ವೇಳೆ ಕೆಲವು ಸದಸ್ಯರು ಈ ಭಾಗದಲ್ಲಿ ಹೆಚ್ಚು ಅಲ್ಪಸಂಖ್ಯಾತರಿದ್ದು ಅವರಿಗೂ ಮುಂದಿನ ಸಾಲಿಗೆ ಹೆಚ್ಚು ಮನೆಗಳು ಮೀಸಲಾತಿಯಂತೆ ದೊರಕುವಂತಾಗಬೇಕು ಎಂದರು. ಅದಕ್ಕೆ ಉತ್ತರಿಸಿದ ಬೇಟೋಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಣಿ, ಸರಕಾರದ ನಿಯಮದಂತೆ ಹೆಚ್ಚುವರಿಯಾಗಿ ಬಸವ ವಸತಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಗ್ರಾಮೀಣ ಯೋಜನೆಯಡಿ ಪ.ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಮನೆ ಹಂಚಲಾಗಿದೆ. ಇನ್ನು ಇತರ ಜಾತಿ ಪಂಗಡದವರು ನಮ್ಮ ವ್ಯಾಪ್ತಿಯಲ್ಲಿ ಕಡಿಮೆ ಫಲಾನುಭವಿಗಳಿದ್ದು ಕೆಲವೆ ಮನೆ ಬಾಕಿ ಇರುವುದಾಗಿ ತಿಳಿಸಿದರಲ್ಲದೆ. ಅಲ್ಪ ಸಂಖ್ಯಾತ ಫಲಾನು ಭವಿಗಳಿಗೆ ಸರಕಾರದ ನಿಯಮ ಮೀಸಲಾತಿಯಂತೆ ವಿತರಿಸಲಾಗುವುದು ಎಂದು ಸಭೆಗೆ ತಿಳಿಸಿದರು. ಸದಸ್ಯರುಗಳಾದ ಎ.ಎ. ವಸಂತ ಕಟ್ಟಿ, ಪಿ.ಬಿ. ಚಂಗಪ್ಪ, ಎಂ.ಎA. ರಜಾಕ್, ಸಿ.ಎಸ್. ಸುದೀಶ್ ಅವರುಗಳು ಸಭೆಯಲ್ಲಿ ಮಾತನಾಡಿದರು. ವೇದಿಕೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ಕೆ.ಹೆಚ್. ಅಲೀಮಾ, ವೈ.ಎಂ. ಶಾಂತಿ, ಬಿ.ಜೆ. ಯಶೋಧÀ, ಸಿ.ಎಸ್. ಸುದೀಶ್, ಪಿ.ಕೆ. ಗೀತಾ, ಪಿ.ಎಂ. ಲಕ್ಷಿö್ಮ, ಕೆ.ಆರ್. ಲತಾ ಉಪಸ್ಥಿತರಿದ್ದರು.