ಕುಶಾಲನಗರ, ಆ. ೧: ಪದವಿ ಪೂರ್ವ ಶಿಕ್ಷಣ ಇಲಾಖೆ ಕೊಡಗು ಜಿಲ್ಲಾ ಉಪ ನಿರ್ದೇಶಕರಾಗಿ ನೂತನವಾಗಿ ನಿಯೋಜನೆಗೊಂಡಿ ರುವ ಎಂ. ಎಲ್. ಚಿದಾನಂದ ಕುಮಾರ್ ಅವರನ್ನು ಕುಶಾಲನಗರ ಬಳಿ ಪದವಿ ಪೂರ್ವ ಶಿಕ್ಷಣ ಇಲಾಖೆ ನೌಕರರ ಸಂಘದ ಅಧ್ಯಕ್ಷ ವಾಸ್, ಪದಾಧಿಕಾರಿಗಳು ಹಾಗೂ ಜಿಲ್ಲೆಯ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು ಮತ್ತು ಕಾಲೇಜು ಆಡಳಿತ ಮಂಡಳಿ ಪ್ರಮುಖರು ಬರಮಾಡಿಕೊಂಡರು. ಕುಶಾಲನಗರ ಕೊಪ್ಪ ಗಡಿಭಾಗದ ಕಾವೇರಿ ಪ್ರತಿಮೆ ಬಳಿ ಸ್ವಾಗತ ಕೋರಿದರು.