ನಾಪೋಕ್ಲು, ಆ. ೧: ಇಲ್ಲಿಗೆ ಸಮೀಪದ ಕೊಳಕೇರಿ ಗ್ರಾಮದ ಕಾಫಿ ತೋಟದಲ್ಲಿ ಕಂಡು ಬಂದ ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ಹಿಡಿದು ರಕ್ಷಿಸಲಾಗಿದೆ.

ಕೊಳಕೇರಿ ಗ್ರಾಮದ ಕನ್ನಂಬಿರ ಪವನ್ ಪೂವಯ್ಯ ಎಂಬವರ ಕಾಫಿ ತೋಟದಲ್ಲಿ ಶುಕ್ರವಾರ ಕಾರ್ಮಿಕರು ಕೆಲಸ ಮಾಡುತ್ತಿರುವ ಸಂದರ್ಭ ಸುಮಾರು ೧೪ ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪ ಪತ್ತೆಯಾಗಿದೆ. ಬಳಿಕ ಮೂರ್ನಾಡು ಕೋಡಂಬೂರುವಿನ ಉರಗ ತಜ್ಞ ಪ್ರಜ್ವಲ್ ಕುಮಾರ್ ಅವರನ್ನು ಸಂಪರ್ಕಿಸಿದ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪ್ರಜ್ವಲ್ ಕುಮಾರ್ ಹಾವನ್ನು ಹಿಡಿದು ಮಾಕುಟ್ಟ ರಕ್ಷಿತಾ ಅರಣ್ಯದಲ್ಲಿ ಬಿಡುವುದರ ಮೂಲಕ ಕಾಳಿಂಗ ಸರ್ಪವನ್ನು ರಕ್ಷಿಸಿದ್ದಾರೆ.

ಇಂತಹ ವಿಷಕಾರಿ ಹಾವುಗಳು ಕಂಡುಬAದಲ್ಲಿ ಕೊಲ್ಲಬೇಡಿ. ಭಯಪಡುವ ಅವಶ್ಯಕತೆ ಇಲ್ಲ. ನನಗೆ ಮಾಹಿತಿ ನೀಡಿದರೆ ಹಾವುಗಳನ್ನು ಹಿಡಿದು ರಕ್ಷಿಸಲಾಗುವುದು ಎಂದು ಉರಗ ತಜ್ಞ ಪ್ರಜ್ವಲ್ ಕುಮಾರ್ ತಿಳಿಸಿದರು. ಅವರನ್ನು ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ ೯೭೪೦೩೦೪೩೩೮.