ಸಿದ್ದಾಪುರ, ಆ. ೧: ಮಾನಸಿಕ ಒತ್ತಡ ಹಾಗೂ ದುಶ್ಚಟಗಳಿಂದ ದೂರವಿದ್ದು ಗುಣಮಟ್ಟದ ಆಹಾರ ಸೇವನೆಯೊಂದಿಗೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕೆAದು ಮೈಸೂರು ಅಲ್ ಅನ್ಸರ್ ಆಸ್ಪತ್ರೆಯ ವೈದ್ಯ ಡಾ. ಜಾವೀದ್ ಸಲಹೆ ನೀಡಿದ್ದಾರೆ. ಸರ್ವ ಸಹಾಯ ಮಿತ್ರ ಮಂಡಳಿ ವತಿಯಿಂದ ಚೆನ್ನಯ್ಯನಕೋಟೆಯಲ್ಲಿ ಕಾರ್ಗಿಲ್ ವಿಜಯೋತ್ಸವ ಹಾಗೂ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಪುಣ್ಯಸ್ಮರಣೆ ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕ ಆಯೋಜಿಸಲಾಗಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಕಲಬೆರಕೆಯ ಜಂಕ್ ಫುಡ್ನತ್ತ ಮುಖ ಮಾಡುತ್ತಿದ್ದು ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ಪ್ರತಿಯೊಬ್ಬರು ಆರೋಗ್ಯ ತಪಾಸಣೆಯೊಂದಿಗೆ ಆರೋಗ್ಯ ಕಾಳಜಿಯ ಸಲಹೆಗಳನ್ನು ಮನವರಿಕೆ ಮಾಡಿಕೊಂಡು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗ ಬೇಕೆಂದರು. ಅಲ್ ಅನ್ಸರ್ ಆಸ್ಪತ್ರೆಯ ಶಿಬಿರ ಸಂಯೋಜಕ ಅಬ್ದುಲ್ ಕಲ್ಲಕ್ ಮಾತನಾಡಿ, ಕಳೆದ ೧೨ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಆಸ್ಪತ್ರೆಯಲ್ಲಿ ಎಲ್ಲಾ ತರಹದ ಅತ್ಯಾಧುನಿಕ ವೈದ್ಯಕೀಯ ಸೇವೆಯನ್ನು ನೀಡಲಾಗುತ್ತಿದ್ದು ಕಳೆದ ಏಳು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ನೂರಾರು ಶಿಬಿರಗಳನ್ನು ಆಯೋಜಿಸಲಾಗಿದೆ ಎಂದರು.
ಈ ಸಂದರ್ಭ ಸರ್ವ ಸಹಾಯಿ ಮಿತ್ರ ಮಂಡಳಿ ಅಧ್ಯಕ್ಷ ವಿಜು, ಉಪಾಧ್ಯಕ್ಷೆ ದೊಡ್ಡಮ್ಮ, ಪ್ರಧಾನ ಕಾರ್ಯದರ್ಶಿ ಇಂದಿರಾ ಮುರ್ಗೇಶ್, ಗೌರವಾಧ್ಯಕ್ಷ ಸಲೀಂ, ಗೌರವ ಸಲಹೆಗಾರ ಅಬ್ದುಲ್ ರಹಿಮಾನ್, ಖಜಾಂಚಿ ಶಶಿ ಅಚ್ಚುದನ್, ಸಂಘನಾ ಕಾರ್ಯದರ್ಶಿ ಮಾದೇವ, ಸ್ವಾಗತ ಸಮಿತಿ ಅಧ್ಯಕ್ಷರು ಬನೊಜ್, ಪ್ರಮುಖರಾದ ಸನಲ್, ಸುಶೀಲಾ, ಮಹೇಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.