ಮಡಿಕೇರಿ, ಆ. ೧: ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ವಿಶ್ವ ಯಕೃತ್ ದಿನಾಚರಣೆ ಆಯೋಜಿಸಲಾಗಿತ್ತು. ನಗರದ ರೋಟರಿ ಸಭಾಂಗಣದಲ್ಲಿ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ಕಾರ್ಯಕ್ರಮದಲ್ಲಿ ತಜ್ಞ ವೈದ್ಯ ಡಾ. ಚಂದ್ರಶೇಖರ್ ಪಾಲ್ಗೊಂಡು ಯಕೃತ್ನ ಮಹತ್ವ, ಹೆಪಟೈಟಸ್ ಬಿ. ಮತ್ತು ಸಿ. ಕುರಿತ ಮಾಹಿತಿ, ಸಮಸ್ಯೆ ಹಾಗೂ ನಿವಾರಣೆ ಕುರಿತು ಸಮಗ್ರ ಮಾಹಿತಿ ನೀಡಿದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ, ಕಾರ್ಯದರ್ಶಿ ಬಿ.ಕೆ. ಕಾರ್ಯಪ್ಪ ವೇದಿಕೆಯಲ್ಲಿದ್ದ ಕಾರ್ಯಕ್ರಮವನ್ನು ಮಿಸ್ಟಿ ಹಿಲ್ಸ್ ನಿರ್ದೇಶಕರಾದ ಎ.ಕೆ. ವಿನೋದ್, ದೇವಣಿರ ತಿಲಕ್, ಡಾ. ಚೇತನ್ ನಿರ್ವಹಿಸಿದರು.