ಮಡಿಕೇರಿ, ಆ. ೧: ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಟೆಮಾಡು ಗ್ರಾಮದ ಬೊಟ್ಟೋಳಂಡ ಉತ್ತಂ ಮುತ್ತಪ್ಪ ಅವರ ಗೋದಾಮಿನಲ್ಲಿದ್ದ ಕರಿ ಮೆಣಸು ಹಾಗೂ ಕಾಫಿ ಕಳುವು ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತಾರೀಕು ೦೯.೦೬.೨೦೨೫ ರಂದು ಕಳುವಾಗಿರುವ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ೭ನೇ ಹೊಸಕೋಟೆಯ ಬಿ.ಈ ಪ್ರಕಾಶ್ ಪೂಜಾರಿ, ಚೆಟ್ಟಿಮಾನಿ ಗ್ರಾಮದ ಎಂ.ಎ ಶೇಖರ್ ಎಂಬವರುಗಳನ್ನು ಬಂಧಿಸಿದ್ದಾರೆ. ಬಂದಿತರಿAದ ೩೪೨ ಕೆಜಿ ಕಾಫಿ, ೨೪೦ ಕೆಜಿ ಕರಿಮೆಣಸು ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ, ಪಿ.ಎ ಸೂರಜ್, ಗ್ರಾಮಾಂತರ ಠಾಣೆ ನಿರೀಕ್ಷಕ ಹೆಚ್. ವಿ ಚಂದ್ರಶೇಖರ್, ಠಾಣಾಧಿಕಾರಿ ಹೆಚ್.ಈ. ವೆಂಕಟ್, ಅಪರಾಧ ಪತ್ತೆದಳ ಸಿಬ್ಬಂದಿಗಳು, ತಾಂತ್ರಿಕ ವಿಭಾಗದ ಸಿಬ್ಬಂದಿಗಳು ಭಾಗವಹಿಸಿದ್ದರು.