ಸಿದ್ದಾಪುರ, ಆ. ೧: ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಯ ಮರಂದೋಡ, ನರಿಯಂದಡ, ಚೇಲಾವರ, ಕೊಕೇರಿ, ಕರಡ ಭಾಗದ ಕಾಫಿ ತೋಟಗಳಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟು ದಾಂಧಲೆ ನಡೆಸಿ ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿವೆ.

ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಂ ನೇತೃತ್ವದಲ್ಲಿ ಶುಕ್ರವಾರದಂದು ಕಾರ್ಯಾಚರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮರಿಯಾನೆಗಳು ಸೇರಿದಂತೆ ೧೦ಕ್ಕೂ ಅಧಿಕ ಕಾಡಾನೆಗಳು ಕಂಡುಬAದವು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸಮೀಪದ ಬಿದ್ದಂಡ ತಟ್ಟು ಕಾಡಿಗೆ ಹಾಗೂ ಪದಿನಾಲ್ಕುನಾಡು ಕೆರಟಿ ಕಾಡಿಗೆ ಕಾಡಾನೆಗಳನ್ನು ಓಡಿಸಿದರು. ಕಾರ್ಯಾಚರಣೆಯಲ್ಲಿ ವೀರಾಜಪೇಟೆ ಉಪವಲಯ ಅಧಿಕಾರಿ ರಾಘವ, ಶ್ರೀನಿವಾಸ್, ಅರಣ್ಯ ಸಿಬ್ಬಂದಿಗಳು. ಹಾಗೂ ಆನೆ ಕಾರ್ಯಪಡೆ ಆರ್. ಆರ್.ಟಿ. ತಂಡದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.