ಸುಂಟಿಕೊಪ್ಪ, ಆ. ೧: ಮಾದಾಪುರ ಸುತ್ತಲಿನ ಮಳೆ ಪ್ರವಾಹ ಪೀಡಿತ ನಿರ್ವಸತಿ ಕುಟುಂಬಗಳಿಗೆ ಮಾದಾಪುರ ಸಮೀಪದ ಗರಗಂದೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿ ಕಾಳಜಿ ಕೇಂದ್ರದಲ್ಲಿ ಇರುವ ೩೫ ಜನರ ಆರೋಗ್ಯ ವಿಚಾರಿಸಿತು.
ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ಶ್ರೀನಿವಾಸ್ ನೇತೃತ್ವದ ಆಯೋಗ ತಂಡದಲ್ಲಿ ಮಾದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನಿಶಾ, ಡಾ. ದರ್ಶನ್ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಶ್ವಜ್ಞಾ ಭೇಟಿ ನೀಡಿ ಕೇಂದ್ರದಲ್ಲಿ ಇರುವ ಜನರ ಆರೋಗ್ಯವನ್ನು ವಿಚಾರಿಸಿ ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು ಮೂಡಿಸಲಾಯಿತು.
ಆರೋಗ್ಯ ಇಲಾಖೆ ವತಿಯಿಂದ ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ ಶ್ರೀನಿವಾಸ್ಮಾತನಾಡಿ, ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳಾದ ಅಧಿಕ ರಕ್ತದೊತ್ತಡದ ಬಗ್ಗೆ, ಹೃದಯ ಸಂಬAಧಿ ಖಾಯಿಲೆಗಳ ಬಗ್ಗೆ, ಮಧುಮೇಹ ಖಾಯಿಲೆಯ ಬಗ್ಗೆ, ಕ್ಯಾನ್ಸರ್ ಖಾಯಿಲೆಯ ಬಗ್ಗೆ, ಪಾರ್ಶ್ವವಾಯುವಿನ ಖಾಯಿಲೆ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡಿ ಅವುಗಳನ್ನು ತಡೆಗಟ್ಟುವ ಕುರಿತು ಮಾಹಿತಿ ನೀಡಿದರು.
ಮಳೆಗಾಲದಲ್ಲಿ ಹರಡ ಬಹುದಾದ ಖಾಯಿಲೆಗಳ ಬಗ್ಗೆ, ವೈಯಕ್ತಿಕ ಶುಚಿತ್ವ, ರಕ್ತಹೀನತೆಯ ಬಗ್ಗೆ ಮಾಹಿತಿಯನ್ನು ನೀಡಿದರು. ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಶ್ವಜ್ಞಾ ಮಾತನಾಡಿ, ಡೆಂಗ್ಯೂ ಜ್ವರ ಹಾಗೂ ಡೆಂಗ್ಯೂ ಜ್ವರದ ಲಕ್ಷಣಗಳ ಬಗ್ಗೆ, ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಹಾಗೆಯೇ ಅತಿಸಾರ ಭೇದಿ ನಿಯಂತ್ರಣದ ಬಗ್ಗೆ ತಿಳಿಸಿದರು. ಡೆಂಗ್ಯೂ, ಮಲೇರಿಯಾ ಜ್ವರ ಶೀಘ್ರವಾಗಿ ಪತ್ತೆಹಚ್ಚಿ ಸಂಪೂರ್ಣವಾದ ಚಿಕಿತ್ಸೆಯನ್ನು ನೀಡುವುದರ ಮೂಲಕ ಗುಣಪಡಿಸಬಹುದು ಎಂದು ತಿಳಿಸಿದ ಅವರು, ಮಲೇರಿಯಾ ಜ್ವರದ ಲಕ್ಷಣಗಳು, ಚಿಕಿತ್ಸಾ ಕ್ರಮಗಳ, ಸೊಳ್ಳೆಗಳ ಜೀವನ ಚಕ್ರದ ಬಗ್ಗೆ ಮಾಹಿತಿ ನೀಡಿದರು.
ಮಾದಾಪುರ ಆರೋಗ್ಯ ನಿರೀಕ್ಷಣಾಧಿಕಾರಿ ಶಿವಪ್ಪ ಮಾತನಾಡಿ, ಚಿಕೂನ್ ಗುನ್ಯಾ ಜ್ವರ, ರಾಷ್ಟಿçÃಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮ, ರಾಷ್ಟಿçÃಯ ಕುಷ್ಟರೋಗ ನಿರ್ಮೂಲನೆ, ಬಗ್ನಾಯಿ ಹಾಗೂ ಹಾವು ಕಡಿತದ ಬಗ್ಗೆ ಮಾಹಿತಿ ನೀಡಿದರು. ಪ್ರಯೋಗ ಶಾಲಾ ತಂತ್ರಜ್ಞ ಪ್ರಜ್ವಲ್, ಸಮುದಾಯ ಆರೋಗ್ಯ ಅಧಿಕಾರಿ ಶಫಿನಾ, ಆಶಾ ಕಾರ್ಯಕರ್ತೆ ಪ್ರೇಮಾ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರು ಮತ್ತು ಸಹ ಶಿಕ್ಷಕರು ಇದ್ದರು.