ಕಣಿವೆ,ಜು. ೩೧: ಕಾಳಸಂತೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ನೀಡಲಾಗುವ ಅಕ್ಕಿಯನ್ನು ಕಾಳಸಂತೆ ಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡು ತ್ತಿರುವುದನ್ನು ಅಧಿಕಾರಿಗಳು ಪತ್ತೆಹಚ್ಚಿ ೬೮೦ ಕೆಜಿ ಅಕ್ಕಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕುಶಾಲನಗರ ತಾಲೂಕಿನ ಆಹಾರ ಅಧಿಕಾರಿ ಸ್ವಾತಿ ಎಂಬವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಗುರುವಾರ ಸುಂಟಿಕೊಪ್ಪದ ಕೆಲವು ಮನೆಗಳಿಂದ ಅಕ್ಕಿ ಚೀಲವನ್ನು ಸಂಗ್ರಹಿಸಿ ಗೂಡ್ಸ್ ಆಟೋದಲ್ಲಿ ತುಂಬಿಕೊAಡು ಗದ್ದೆಹಳ್ಳದ ಮೂಲಕ ಕುಶಾಲನಗರದ ಕಡೆಗೆ ಬರುತ್ತಿದ್ದ ವಾಹನವನ್ನು ೪ಆರನೇ ಪುಟಕ್ಕೆ

(ಮೊದಲ ಪುಟದಿಂದ) ಹಿಂಬಾಲಿಸಿದಾಗ ಕುಶಾಲನಗರದ ರೈತ ಭವನ ರಸ್ತೆಯ ಮೂಲಕ ಗೌಡ ಸಮಾಜದ ಮಾರ್ಗವಾಗಿ ಸುಂದರನಗರದತ್ತ ತೆರಳುತ್ತಿರುವುದು ತಿಳಿದುಬಂದಿದೆ. ನಂತರ ಆಹಾರ ಅಧಿಕಾರಿ ಸ್ವಾತಿ ತಹಶೀಲ್ದಾರ್ ಕಿರಣ್ ಗೌರಯ್ಯ ಅವರ ಗಮನಕ್ಕೆ ತಂದು ಪೊಲೀಸರ ಮೂಲಕ ಸುಂದರನಗರದಲ್ಲಿ ವಾಹನವನ್ನು ತಡೆಯಲಾಗಿದೆ. ಈ ಸಂದರ್ಭ ಆಟೋ ಚಾಲಕ ವಾಹನವನ್ನು ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ.

ಈತ ಪಿರಿಯಾಪಟ್ಟಣ ತಾಲೂಕಿನ ರಾವಂದೂರು ನಿವಾಸಿ ರಾಜಶೇಖರ ನಾಯಕ್ ಎಂದು ಗುರುತಿಸಲಾಗಿದೆ. ವಾಹನದೊಂದಿಗೆ ೬೮೦ ಕೆಜಿ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದ್ದು ಕುಶಾಲನಗರ ಠಾಣೆಯಲ್ಲಿ ಈ ಸಂಬAಧ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಕಿರಣ್ ಗೌರಯ್ಯ ಭೇಟಿ ನೀಡಿ ಪರಿಶೀಲಿಸಿದ್ದಾರೆ.