* ಅಪರಾಧ, ಅಗ್ನಿ ಅನಾಹುತ ಇಂತಹ ಯಾವುದೇ ಸಮಸ್ಯೆ ಎದುರಾದಾಗ ೧೧೨ ಸಂಖ್ಯೆಗೆ ಕರೆಮಾಡಿ ತಿಳಿಸಿದಲ್ಲಿ ಕೂಡಲೇ ಸ್ಪಂದನ ದೊರಕಲಿದೆ.
* ಅಪಘಾತ, ಜಗಳ, ಕಳ್ಳತನ, ದರೋಡೆ ಮುಂತಾದ ಅಪರಾಧಗಳು ನಡೆದ ಸಂದರ್ಭ ೧೧೨ ಸಂಖ್ಯೆಗೆ ಕರೆ ಮಾಡಿ ನೆರವು ಪಡೆಯಿರಿ.
* ೧೧೨ ಸಂಖ್ಯೆಯನ್ನು ತುರ್ತು ಸಂದರ್ಭಗಳಲ್ಲಿ ತುರ್ತು ನೆರವಿಗಾಗಿ ಮಾತ್ರ ಬಳಸಿಕೊಳ್ಳಿ.
* ನಡೆಯದ ಘಟನೆಗಳ ಬಗ್ಗೆ ೧೧೨ ಸಂಖ್ಯೆಗೆ ಸುಳ್ಳು ದೂರು ನೀಡಿದಲ್ಲಿ ಕಾನೂನುಕ್ರಮ ಎದುರಿಸಬೇಕಾಗುತ್ತದೆ. ೧೧೨ ದಿನದ ೨೪ ಗಂಟೆಗಳ ಕಾಲ ಚಾಲನೆಯಲ್ಲಿರುತ್ತದೆ.
* ೧೧೨ ಸಂಖ್ಯೆಗೆ ಕರೆ ಮಾಡಿದವರು ಯಾವ ಸ್ಥಳದಿಂದ ಕರೆ ಮಾಡಿದ್ದಾರೆ ಎಂಬುದನ್ನು ಸುಲಭದಲ್ಲಿ ಪತ್ತೆ ಹಚ್ಚಲಾಗುತ್ತದೆ.