ಸೋಮವಾರಪೇಟೆ, ಆ. ೧: ಮೂಲತಃ ಬೇಳೂರು ನಿವಾಸಿ, ಬಿಜೆಪಿ ಮಾಜೀ ರಾಜ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಬಿ. ಶಿವಪ್ಪ ಅವರ ೮ನೇ ವರ್ಷದ ಸಂಸ್ಮರಣೋತ್ಸವ ಕಾರ್ಯಕ್ರಮ ಇಲ್ಲಿನ ವಿದ್ಯಾ ಗಣಪತಿ ದೇವಾಲಯದಲ್ಲಿ ನಡೆಯಿತು.
ಬಿ.ಬಿ. ಶಿವಪ್ಪ ಅಭಿಮಾನಿಗಳ ಬಳಗದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳು, ಶಿವಪ್ಪ ಅವರ ಸಾಮಾಜಿಕ ಜೀವನವನ್ನು ಸ್ಮರಿಸಿದರು.
ಈ ಸಂದರ್ಭ ಕೊಡಗು ಜಿ.ಪಂ. ಮಾಜಿ ಸದಸ್ಯ ಡಿ.ಬಿ. ಧರ್ಮಪ್ಪ, ಪ್ರಮುಖರಾದ ಬಿ.ಟಿ. ತಿಮ್ಮಶೆಟ್ಟಿ, ರಾಘವ, ಬಿ.ಎಸ್. ಅನಂತರಾಮ್, ತಾಕೇರಿ ಪೊನ್ನಪ್ಪ, ಪ್ರೇಮನಾಥ್, ಕೆ.ಜಿ. ಸುರೇಶ್, ಸುಮಾ ಸುದೀಪ್, ಎ.ಎಸ್. ಮಲ್ಲೇಶ್, ಶೇಷಪ್ಪ ಸೇರಿದಂತೆ ಇತರರು ಇದ್ದರು.