ಮಡಿಕೇರಿ, ಜು. ೩೧: ಕೊಡಗು ಜಿಲ್ಲಾ ಸರ್ಕಾರಿ ಮತ್ತು ಅನುದಾನ ಸಹಿತ ಪ್ರೌಢಶಾಲೆಯ ಹಿಂದಿ ಭಾಷಾ ವಿಷಯದ ಶಿಕ್ಷಕರು ಮಡಿಕೇರಿ ಯಲ್ಲಿರುವ ಸುದರ್ಶನ ಅತಿಥಿಗೃಹದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಪ್ರೌಢಶಾಲಾ ಪಠ್ಯಕ್ರಮದ ಹಿಂದಿ ಭಾಷಾ ವಿಷಯದಲ್ಲಿ ರಾಜ್ಯ ಸರ್ಕಾರ ದ್ವಿ ಭಾಷಾ ಸೂತ್ರವನ್ನು ಜಾರಿಗೊಳಿಸದೆ ಈ ಹಿಂದಿ ಭಾಷಾ ವಿಷಯವನ್ನು ತ್ರಿಭಾಷಾ ಸೂತ್ರವನ್ನಾಗಿ ಮುಂದುವರಿಸುವAತೆ ಸಚಿವರಾದ ಮಧು ಬಂಗಾರಪ್ಪ ಅವರಿಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಬೇಕೆಂದು ಪ್ರೌಢಶಾಲೆಯ ಶಿಕ್ಷಕರು ಮನವಿ ಸಲ್ಲಿಸಿದರು.

ಈ ಸಂದರ್ಭ ಕೊಡಗು ಜಿಲ್ಲಾ ಪ್ರೌಢ ಶಾಲೆಯ ಸಹ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಗಳಾದ ಮಹೇಂದ್ರ ಎಂ.ಎಸ್., ಜಿಲ್ಲಾ ಹಿಂದಿ ಭಾಷಾ ವಿಷಯದ ಅಧ್ಯಕ್ಷರಾದ ಮೆಹಬೂಬ್ ಸಾಬ್, ಕಾರ್ಯದರ್ಶಿಗಳಾದ ಸರ್ವಿನ್ ಡಿಸೋಜಾ, ನವೀನ್, ಶರತ್ ಕುಮಾರ್ ಹಾಗೂ ಇತರರು ಇದ್ದರು.