ಗುಡ್ಡೆಹೊಸೂರು/ಕುಶಾಲನಗರ, ಆ. ೨: ಇಲ್ಲಿಗೆ ಸಮೀಪದ ಆನೆಕಾಡು ಬಳಿ ಮಡಿಕೇರಿ ಕಡೆಯಿಂದ ಬರುತ್ತಿದ್ದ ಕಾರು (ಕೆ.ಎ.೧೯ ಎಂ.ಎ೬೫೯೯) ಮತ್ತು ಕುಶಾಲನಗರ ಕಡೆಯಿಂದ ಮಡಿಕೇರಿ ಕಡೆ ತೆರಳುತ್ತಿದ್ದ ಬೈಕ್ (ಕೆ.ಎ.೨೧ ೪೪೬೮) ನಡುವೆ ಮುಖಾಮುಕಿ ಡಿಕ್ಕಿಯಾಗಿ ಬೈಕ್ ಚಾಲಕ ಮೃತಪಟ್ಟ ಘಟನೆ ನಡೆದಿದೆ.
ಸುಳ್ಯ ಸಮೀಪದ ಪೆರುವಾಜೆ ನಿವಾಸಿ ಬೈಕ್ ಚಾಲಕ ಕಾರ್ತಿಕ್ ಭಟ್ ಮೃತ ದುರ್ದೈವಿಯಾಗಿದ್ದು, ಕುಶಾಲನಗರ ಆಸ್ಪತ್ರೆಗೆ ಸಾಗಿಸುವ ಸಂದÀರ್ಭ ಕೊನೆಯುಸಿರೆಳೆದಿದ್ದಾರೆ. ಮೃತ ಕಾರ್ತಿಕ್ ಭಟ್ (೩೦) ಮೈಸೂರಿನ ಇನ್ಫೋಸಿಸ್ ಉದ್ಯೋಗಿಯಾಗಿದ್ದರು. ಮಾದಾಪುರದ ಕ್ಯಾಪ್ಟನ್ ಬೋಪಣ್ಣ ಎಂಬವರು ತಮ್ಮ ಕುಟುಂಬದೊAದಿಗೆ ಮೈಸೂರಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಪತ್ನಿ ಹಾಗೂ ಮಕ್ಕಳು ಕಾರಿನಲ್ಲಿದ್ದರು. ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಸಾಗಿಸಲಾಗಿದೆ. ಸ್ಥಳಕ್ಕೆ ವೃತ್ತ ನಿರೀಕ್ಷಕರಾದ ದಿನೇಶ್ ಕುಮಾರ್ ಮತ್ತು ಸಂಚಾರಿ ಪೊಲೀಸ್ ಠಾಣಾಧಿಕಾರಿಗಳಾದ ಗಣೇಶ್ ಮತ್ತು ಶ್ರೀನಿವಾಸ್ ಹಾಜರಿದ್ದು ಪ್ರಕರಣ ದಾಖಲಿಸಲಾಗಿದೆ. ಸಿಬ್ಬಂದಿಗಳಾದ ರಮೇಶ್ ಮತ್ತು ಸುಮಂತ್ ಹಾಜರಿದ್ದರು.
- ಗಣೇಶ್ ಕುಡೆಕ್ಕಲ್, ಸಿಂಚು, ಕೃಷ್ಣಬೆಟ್ಟ ಸುದ್ದಿಬಿಡುಗಡೆ , ಸುಳ್ಯ