ಸುಂಟಿಕೊಪ್ಪ, ಆ. ೨: ಇಲ್ಲಿನ ಗದ್ದೆಹಳ್ಳದಲ್ಲಿ ತಾ.೩ರಂದು (ಇಂದು) ಮಧ್ಯಾಹ್ನ ಒಂದು ಗಂಟೆಯಿAದ ಐದು ಗಂಟೆಯವರೆಗೆ ‘ಗದ್ದೆಹಳ್ಳಲೀ ಗದ್ದೆ ಆಟ’ ಎಂಬ ಹೆಸರಿನಲ್ಲಿ ಸಾಂಪ್ರದಾಯಿಕ ಕ್ರೀಡೆ ಮತ್ತು ಆಟಿ ಹದಿನೆಂಟನ್ನು ಏರ್ಪಡಿಸಲಾಗಿದೆ.

ಯಂಕನ ಕರುಂಬಯ್ಯ ಅವರಿಗೆ ಸೇರಿದ ಗದ್ದೆಯಲ್ಲಿ ಈ ಕ್ರೀಡಾಕೂಟ ನಡೆಯಲಿದ್ದು, ಸಾರ್ವಜನಿಕ ಪುರುಷರಿಗಾಗಿ ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದ್ದು ಇದರಲ್ಲಿ ವಿಜೇತರಾಗುವ ತಂಡಕ್ಕೆ ರೂ. ೧೦,೦೦೦ ನಗದು ಬಹುಮಾನ ಮತ್ತು ಆಕರ್ಷಕ ಟ್ರೋಫಿ ದೊರೆಯಲಿದೆ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ರೂ. ೫೦೦೦ ನಗದು ಬಹುಮಾನ ಮತ್ತು ಆಕರ್ಷಕ ಟ್ರೋಫಿ ಸಿಗಲಿದೆ. ಇದರೊಂದಿಗೆ ಎಲ್ಲಾ ವಯೋಮಾನದವರಿಗೆ ಓಟದ ಸ್ಪರ್ಧೆ ಮತ್ತು ರಿಲೇ ಸ್ಪರ್ಧೆ, ಗನ್ ಫ್ಯಾಮಿಲಿ ಗೇಮ್ಸ್ ಏರ್ಪಡಿಸಲಾಗಿದ್ದು, ಭಾಗವಹಿಸುವ ಎಲ್ಲಾ ತಂಡಗಳಿಗೆ ಟ್ರೋಫಿ ಸಿಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.