ಉತ್ತರಾಖಂಡದ ಮಂದಾಕಿನಿ ನದಿಯ ಬಳಿ ಇರುವ ಕೇದಾರನಾಥದ ಶಿವನ ದೇವಸ್ಥಾನ ಹಿಂದೂಗಳ ಪವಿತ್ರ ನಾಲ್ಕು ಧಾಮಗಳ ಪೈಕಿ ಒಂದಾಗಿದೆ. ಅವೆಂದರೆ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ್ ಹಾಗೂ ಭದ್ರಿನಾಥ್ ನಾಲ್ಕು ಪ್ರಮುಖ ಪವಿತ್ರ ಧಾಮಗಳಾಗಿವೆ. ಹಾಗಾಗಿ ಇಲ್ಲಿ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಪ್ರತಿ ದಿನವೂ ಬರುವುದು ಸರ್ವೇ ಸಾಮಾನ್ಯವಾಗಿದೆ.

ನಾಲ್ಕೂ ಧಾಮಗಳಲ್ಲಿ ಸಂಪರ್ಕ ವ್ಯವಸ್ಥೆ, ರಕ್ಷಣೆ ಸುಭದ್ರತೆ ಹಾಗೂ ಪ್ರವಾಸೋದ್ಯಮದ ಬಿರುಸು ಹೆಚ್ಚಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಸರಕಾರವು ಅವುಗಳ ಅಭಿವೃದ್ಧಿಗೆ ಪಣ ತೊಟ್ಟಿದೆ. ಅದರಲ್ಲಿ ಕೇದಾರನಾಥ್ ರೋಪ್ ವೇ ಯೋಜನೆ ಕೂಡ ಒಂದಾಗಿದೆ.

ನವೆಂಬರ್ ೨೦೨೧ರಲ್ಲಿ ಪ್ರಧಾನಿಗಳಾದ ನರೇಂದ್ರ ಮೋದಿ ಅವರು ಕೇದಾರನಾಥ್ ದೇವಸ್ಥಾನದ ಪುಣ್ಯಕ್ಷೇತ್ರಕ್ಕೆ ಭೇಟಿ ಕೊಟ್ಟಾಗ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಮೊದಲ ಬಾರಿಗೆ ಘೋಷಿಸಿದರು. ಮಾರ್ಚ್ ೨೦೨೫ರಲ್ಲಿ ಪ್ರಧಾನಿ ನೇತೃತ್ವದ ಯೂನಿಯನ್ ಕ್ಯಾಬಿನೆಟ್ ಪರ್ವತ ಮಾಲಾ ಪರಿಯೋಜನೆಯಡಿಯಲ್ಲಿ ಈ ಯೋಜನೆಗೆ ಅನುಮೋದನೆ ನೀಡಿತು.

೧೨.೯ ಕಿಲೋಮೀಟರ್ ಸೊನ್ ಪ್ರಯಾಗದಿಂದ ಕೇದಾರನಾಥ್ ಸಂಪರ್ಕಿಸುವ ಈ ರೋಪ್ ವೇ ೮-೯ ಗಂಟೆಗಳ ಚಾರಣದ ಪ್ರಯಾಣವನ್ನು ೩೬ ನಿಮಿಷದ ಹಾದಿಯಾಗಿ ಪ್ರವಾಸಿಗರಿಗೆ ಅನುಕೂಲ ಮಾಡುತ್ತದೆ. ಈ ಯೋಜನೆಗೆ ತಗುಲುವ ಒಟ್ಟು ವೆಚ್ಚ ಸುಮಾರು ರೂ. ೪,೦೮೧.೨೮ ಕೋಟಿಗಳು ಎಂದು ಅಂದಾಜಿಸಲಾಗಿದೆ...!

೨೬.೪೩ ಹೆಕ್ಟರ್ ಅರಣ್ಯ ಪ್ರದೇಶವನ್ನು ಯೋಜನೆಗೆ ಬಳಸಿಕೊಳ್ಳಲು ರಾಜ್ಯ ಸರಕಾರ ಅನುಮತಿಸಿದೆ. ೧,೦೦೦ ಮರಗಳನ್ನು ಅನಿವಾರ್ಯವಾಗಿ ಹನನ ಮಾಡಬೇಕಾಗಿ ಬಂದಿತು. ಎಲ್ಲಾ ವಾತಾವರಣಕ್ಕೂ ಹೊಂದಿಕೊಳ್ಳಬಲ್ಲ ಸದೃಢವಾದ ರೋಪ್ ವೇ ನಿರ್ಮಿಸುವುದರ ಜೊತೆಗೆ ಪ್ರತಿವರ್ಷ ಬರುವ ಪ್ರವಾಸಿಗರನ್ನು ೨೩ ಲಕ್ಷದಿಂದ ೩೬ ಲಕ್ಷಕ್ಕೆ ಏರಿಸುವ ಗುರಿಯನ್ನು ಹೊಂದಲಾಗಿದೆ. ಸುತ್ತಮುತ್ತದ ಪ್ರದೇಶದಲ್ಲಿ ಈ ಯೋಜನೆ ಮೂಲಕ ಸಾಮಾಜಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿಯನ್ನು ಹೆಚ್ಚಿನ ರೀತಿಯಲ್ಲಿ ನಿರೀಕ್ಷಿಸಲಾಗುತ್ತಿದೆ. ಆ ಮೂಲಕ ಆತಿಥ್ಯ, ಆಹಾರ ಹಾಗೂ ಪಾನಿಯ ಕ್ಷೇತ್ರಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಒದಗುವ ಭರವಸೆ ಇದೆ.

ರೋಪ್ ವೇ ವ್ಯವಸ್ಥೆಯು ಸೊನ್ ಪ್ರಯಾಗ್, ಗೌರಿಕುಂಡ್, ಕೇದಾರನಾಥ ಎಂಬ ಮೂರು ಪ್ರಮುಖ ನಿಲ್ದಾಣಗಳನ್ನು ಹಾಗೂ ಚಿರ್ಬಸ, ಲಿಂಚೋಲಿ ಎಂಬ ಸಣ್ಣ ನಿಲ್ದಾಣಗಳನ್ನು ಒಳಗೊಂಡಿದೆ ಮತ್ತು ೨೦ ಟವರ್‌ಗಳನ್ನು ಹೊಂದಿರಲಿದೆ ಎಂದು ಯೋಜನೆ ರೂಪುರೇಷೆ ಹೇಳುತ್ತದೆ.

ಕೇದಾರನಾಥ್ ದೇವಾಲಯವು ಚಳಿಗಾಲದಲ್ಲಿ ತೀವ್ರವಾದ ಚಳಿ ಹಾಗೂ ಹಿಮಪಾತ ಆಗುವುದರಿಂದ ಮುಚ್ಚಿರುತ್ತದೆ. ಏಪ್ರಿಲ್‌ನಿಂದ ನವೆಂಬರ್ ತನಕ ತೆರೆದಿರುವ ಈ ದೈವಿಕ ತಾಣ ಹಿಂದೂಗಳ ಪ್ರಾಂಜಲ ಶ್ರದ್ಧಾಭಕ್ತಿಯ ಕೇಂದ್ರಬಿAದುವಾಗಿದೆ. ಹಾಗಾಗಿ ಭಕ್ತಗಣ ಸಾಗರೋಪಾದಿಯಲ್ಲಿ ಕೇದಾರನಾಥನ ದರ್ಶನಕ್ಕೆ ಬರುವ ದೃಶ್ಯ ಸಾಮಾನ್ಯವಾದಂತಹದ್ದು. ಕೇದಾರನಾಥ್, ಭಾರತದ ಉತ್ತರಾಖಂಡ ರಾಜ್ಯದ ಗಢವಾಲ್ ಹಿಮಾಲಯದಲ್ಲಿರುವ ಒಂದು ಪವಿತ್ರ ತೀರ್ಥಕ್ಷೇತ್ರವಾಗಿದೆ.

ಇದು ಹಿಂದೂ ಧರ್ಮದ ಚಾರ್‌ಧಾಮ್ ಯಾತ್ರೆಯ ನಾಲ್ಕು ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ (ಯಮುನೋತ್ರಿ, ಗಂಗೋತ್ರಿ, ಕೇದಾರನಾಥ್, ಬದರಿನಾಥ್) ಮತ್ತು ಶಿವ ಭಕ್ತರಿಗೆ ಅತ್ಯಂತ ಪವಿತ್ರವಾದ ಯಾತ್ರಾ ಸ್ಥಳವಾಗಿದೆ. ಕೇದಾರನಾಥ್‌ನ ಮಹತ್ವವನ್ನು ಈ ಕೆಳಗಿನಂತೆ ವಿವರಿಸಬಹುದು:

ಧಾರ್ಮಿಕ ಮಹತ್ವ ಶಿವನಿಗೆ ಸಮರ್ಪಿತ

ಕೇದಾರನಾಥ್ ದೇವಾಲಯವು ಭಗವಾನ್ ಶಿವನಿಗೆ ಸಮರ್ಪಿತವಾಗಿದ್ದು, ಇದನ್ನು ೧೨ ಜ್ಯೋತಿರ್ಲಿಂಗಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಶಿವನನ್ನು ಕೇದಾರೇಶ್ವರ ರೂಪದಲ್ಲಿ ಪೂಜಿಸಲಾಗುತ್ತದೆ.

ಮೋಕ್ಷದ ಮಾರ್ಗ

ಕೇದಾರನಾಥ್ ದರ್ಶನವು ಭಕ್ತರಿಗೆ ಪಾಪ ವಿಮೋಚನೆ ಮತ್ತು ಮೋಕ್ಷ (ಆತ್ಮದ ಮುಕ್ತಿ) ಒದಗಿಸುವುದೆಂದು ನಂಬಲಾಗುತ್ತದೆ. ಚಾರ್ ಧಾಮ್ ಯಾತ್ರೆಯ ಭಾಗವಾಗಿ, ಇದು ಅಧ್ಯಾತ್ಮಿಕ ಶುದ್ಧೀಕರಣಕ್ಕೆ ಪ್ರಮುಖ ಸ್ಥಳವಾಗಿದೆ.

ಪೌರಾಣಿಕ ಕಥೆ

ಪಾಂಡವರು ಮಹಾಭಾರತದ ಕುರುಕ್ಷೇತ್ರ ಯುದ್ಧದ ನಂತರ ತಮ್ಮ ಪಾಪಗಳಿಗೆ ಕ್ಷಮೆಯಾಚಿಸಲು ಶಿವನನ್ನು ಇಲ್ಲಿ ಭೇಟಿಯಾದರೆಂದು ಪುರಾಣಗಳು ಹೇಳುತ್ತವೆ. ಶಿವನು ಗೋವಿನ ರೂಪದಲ್ಲಿ ಇಲ್ಲಿ ತಪ್ಪಿಸಿಕೊಂಡರೂ, ಭೀಮನಿಂದ ಕಂಡುಕೊAಡಾಗ ಶಿವಲಿಂಗವಾಗಿ ಪ್ರಕಟವಾದನೆಂದು ನಂಬಲಾಗಿದೆ. ದೇವಾಲಯದಲ್ಲಿರುವ ತ್ರಿಕೋನಾಕಾರದ ಶಿವಲಿಂಗವು ಈ ಕಥೆಯ ಸಂಕೇತವಾಗಿದೆ.

ಆದಿ ಶಂಕರಾಚಾರ್ಯರ ಸಂಬAಧ

೮ನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರು ಈ ದೇವಾಲಯವನ್ನು ಪುನರ್‌ನಿರ್ಮಾಣ ಮಾಡಿದರೆಂದು ನಂಬಲಾಗಿದೆ. ಅವರ ಸಮಾಧಿಯು ಕೇದಾರನಾಥ್‌ನ ಬಳಿಯಲ್ಲಿದೆ ಎಂದು ಹೇಳಲಾಗುತ್ತದೆ.

ಚಾರ್ ಧಾಮ್‌ಗಳ ಸ್ಥಾಪನೆ ಮಾತ್ರವಲ್ಲ, ನಾಲ್ಕು ಮಠಗಳಾದ ಬದರಿನಾಥದ ಜ್ಯೋತಿರ್ ಮಠ, ದ್ವಾರಕದ ಶಾರದಾ ಮಠ, ಪುರಿಯಲ್ಲಿ ಗೋವರ್ಧನ ಮಠ, ಶೃಂಗೇರಿಯಲ್ಲಿ ಶಾರದಾ ಮಠವನ್ನು ಸ್ಥಾಪಿಸಿದರು.

ಅಧ್ಯಾತ್ಮಿಕ ಮಹತ್ವ

ಕೇದಾರನಾಥನ ಶಿವಲಿಂಗವು ಸ್ವಯಂ ಭೂ ಎಂದು ನಂಬಲಾಗಿದೆ. ಇದನ್ನು ಪಂಚ ಕೇದಾರ ದೇವಾಲಯಗಳ (ಕೇದಾರನಾಥ, ತುಂಗನಾಥ, ರುದ್ರನಾಥ, ಮಧ್ಯ ಮಹೇಶ್ವರ, ಕಲ್ಪೆಶ್ವರ) ಮುಖ್ಯ ಕೇಂದ್ರವಾಗಿ ಪರಿಗಣಿಸಲಾಗಿದೆ. ಇವೆಲ್ಲವೂ ಶಿವನ ವಿವಿಧ ರೂಪಗಳಿಗೆ ಸಂಬAಧಿಸಿದೆ.

ಕೇಂದ್ರ ಸರಕಾರದ ಹಲವು ಪ್ರಯತ್ನಗಳು

ಕೇಂದ್ರ ಸರಕಾರವು ಚಾರ್ ಧಾಮ್ ಯಾತ್ರೆಯನ್ನು ಸುಲಭಗೊಳಿಸಲು ಚಾರ್ ಧಾಮ್ ಹೆದ್ದಾರಿ ಯೋಜನೆ, ಚಾರ್ ಧಾಮ್ ರೈಲ್ವೆ ಯೋಜನೆ, ಇ-ಸ್ವಾಸ್ತö್ಯ ಧಾಮ್ ಪೋರ್ಟಲ್, ಹೆಲಿಕಾಪ್ಟರ್ ಸೌಲಭ್ಯ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಎಲ್ಲವನ್ನು ಮಾಡಿ ಕೇದಾರನಾಥನ ಕ್ಷೇತ್ರಕ್ಕೆ ಮನ್ನಣೆ ನೀಡುತ್ತಿದೆ.

ಕೇದಾರನಾಥ ಕ್ಷೇತ್ರ ಕೇವಲ ಒಂದು ದೇವಾಲಯವಲ್ಲ. ಅಧ್ಯಾತ್ಮಿಕತೆ, ಭಕ್ತಿ ಮತ್ತು ಪ್ರಕೃತಿಯ ಸೌಂದರ್ಯದ ಗರಿಯಂತೆ ಇದೆ. ಇದು ಶಿವನ ಒಂದು ಜ್ಯೋತಿರ್ಲಿಂಗವಾಗಿ, ಚಾರ್ ಧಾಮ್ ಯಾತ್ರೆಯ ಪ್ರಮುಖ ಭಾಗವಾಗಿ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದೆ.

"ಕೇದಾರನಾಥ್ ರೋಪ್ ವೇ ಯೋಜನೆಯು ಪರಿಸರ ಸ್ನೇಹಿಯಾಗಿದ್ದು, ಇದು ಯಾತ್ರಿಕರಿಗೆ ಆರಾಮದಾಯಕ ಮತ್ತು ವೇಗವಾಗಿ ಸಂಪರ್ಕ ಒದಗಿಸುತ್ತದೆ. ಇದರಿಂದ ವೃದ್ಧರು ಮತ್ತು ವಿಶೇಷಚೇತನರಿಗೆ ಕೇದಾರನಾಥನ ದರ್ಶನವು ಸುಲಭವಾಗಲಿದೆ. ಈ ಯೋಜನೆಯು ಉತ್ತರ ಖಂಡದ ಧಾರ್ಮಿಕ ಪ್ರವಾಸೋದ್ಯಮವನ್ನು ಮತ್ತಷ್ಟು ಬಲಪಡಿಸಲಿದೆ" ಎಂದು ಇತ್ತೀಚೆಗೆ ಕೇಂದ್ರ ಕ್ಯಾಬಿನೆಟ್‌ನಲ್ಲಿ ಯೋಜನೆಗೆ ಅನುಮೋದನೆಯನ್ನು ನೀಡುವ ಸಂದರ್ಭ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರು ಭರವಸೆಯ ಮಾತುಗಳನ್ನು ಆಡಿದ್ದರು.

ಕೇದಾರನಾಥ್ ರೋಪ್ ವೇ ಯೋಜನೆಯು ಅಕ್ಟೋಬರ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರಗತಿಯ ಗತಿ ಪಡೆಯಲಿದೆ. ೨೦೨೯-೨೦೩೧ರ ಒಳಗಾಗಿ ಈ ಯೋಜನೆಯು ಮುಕ್ತಾಯಗೊಳ್ಳಲಿದೆ. ಭಾರತದ ಧಾರ್ಮಿಕ ಪ್ರವಾಸೋದ್ಯಮದ ಅಭ್ಯುದಯಕ್ಕೆ ಇಂತಹ ಯೋಜನೆಗಳು ಮತ್ತಷ್ಟು ಪುಷ್ಟಿ ನೀಡಿ, ರಾಷ್ಟಿçÃಯ ಆದಾಯಕ್ಕೆ ಕೊಡುಗೆ ನೀಡಲಿವೆ.

- ಡಿ.ಹೆಚ್. ರಜತ್ ರಾಜ್, ಮಡಿಕೇರಿ. ಮೊ. ೭೪೮೩೨೨೬೨೫೧.