ಮಡಿಕೇರಿ, ಆ. ೨ : ಕೊಡಗಿನ ವಿಶೇಷತೆಗಳಲ್ಲಿ ಒಂದಾದ ಮುಂಗಾರು ಮಳೆಗಾಲದ ಸನ್ನಿವೇಶದ ನಡುವೆ ಎದುರಾಗುವ ಕಕ್ಕಡ-೧೮ರ ಸಂಭ್ರಮ ತಾ. ೩ರಂದು (ಇಂದು) ಜಿಲ್ಲೆಯಲ್ಲಿ ಆಚರಿಸಲ್ಪಡಲಿದೆ. ಮದ್ದ್ ಸೊಪ್ಪಿನ ಪಾಯಸ, ಮದ್ದ್ಪುಟ್ಟ್ ಈ ದಿನದ ವಿಶೇಷ... ಘಮ ಘಮಿಸುವ ಮದ್ದ್ ಸೊಪ್ಪಿನ ಪರಿಮಳದೊಂದಿಗೆ ಪಾಯಸ - ಪುಟ್ಟ್ನ ತಯಾರಿಗಾಗಿ ಜನತೆ ಕಾತರದಿಂದಿದ್ದಾರೆ. ಮಡಿಕೇರಿ ಸೇರಿದಂತೆ ಹಲವೆÀಡೆಗಳಲ್ಲಿ ಈ ವಿಶೇಷ ಸೊಪ್ಪಿನ ಮಾರಾಟದ ಭರಾಟೆ ಇಂದಿನಿAದಲೇ ಕಂಡುಬAದಿದೆ. ಮದ್ದ್ ಪಾಯಸ - ಪುಟ್ಟ್ನೊಂದಿಗೆ ವಿಶೇಷ ಖಾದ್ಯಗಳೊಂದಿಗೆ ಈ ದಿನವನ್ನು ಜನರು ಸಂಭ್ರಮಿಸಲಿದ್ದಾರೆ. ಮನೆ - ಮನೆಗಳಲ್ಲಿ ಇದರ ಆಚರಣೆ ಒಂದೆಡೆಯಾದರೆ ಸಾರ್ವತ್ರಿಕವಾಗಿಯೂ ಕಕ್ಕಡ-೧೮ರ ಆಚರಣೆ ಜರುಗಲಿದೆ. ವಿಶೇಷವಾಗಿ ಪೊನ್ನಂಪೇಟೆಯಲ್ಲಿ ಕೊಡವ ಹಿತರಕ್ಷಣಾ ಬಳಗ, ಕಿಗ್ಗಟ್ಟ್ನಾಡ್ ಕೊಡವ ಸಂಘಟನೆ ಹಾಗೂ ಪೊನ್ನಂಪೇಟೆ ಕೊಡವ ಸಮಾಜದಿಂದ ಪಂಜಿನ ಮೆರವಣಿಗೆ ಸೇರಿದಂತೆ ಹಲವೆಡೆಗಳಲ್ಲಿ ಕೆಸರುಗದ್ದೆ ಕ್ರೀಡಾಕೂಟ, ಸಾರ್ವತ್ರಿಕವಾದ ಸಮಾರಂಭಗಳು ನಿಗದಿಯಾಗಿವೆ.