ಚೆಯ್ಯಂಡಾಣೆ, ಆ. ೨: ಕರ್ನಾಟಕ ರಾಜ್ಯ ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್ ಕೊಡಗು ಜಿಲ್ಲಾ ಸಮಿತಿಯ ವಾರ್ಷಿಕ ಮಹಾಸಭೆ ಕಿಕ್ಕರೆ ಇರ್ಷಾದುಲ್ ಇಸ್ಲಾಂ ಮದ್ರಸ ಸಭಾಂಗಣದಲ್ಲಿ ನಡೆಯಿತು.

ಕರ್ನಾಟಕ ಸುನ್ನಿ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಹಾಗೂ ಕೊಡಗು ಜಿಲ್ಲಾ ನಾಇಬ್ ಖಾಝಿಗಳಾಗಿದ್ದ ಮಾರ್ಹೂಂ ಶೈಖುನಾ ಮಹ್ಮೂದ್ ಮುಸ್ಲಿಯಾರ್ ಅವರ ಖಬರ್ ಝಿಯಾರತ್‌ನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಎಸ್.ಜೆ.ಎಂ. ಕೊಡಗು ಜಿಲ್ಲಾಧ್ಯಕ್ಷ ಮುಸ್ತಫ ಸಖಾಫಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ರಾಜ್ಯಾಧ್ಯಕ್ಷರಾದ ಅಬ್ದುರ್ರಹ್ಮಾನ್ ಮದನಿ ಜೆಪ್ಪು ಉದ್ಘಾಟಿಸಿದರು.

ರಾಜ್ಯ ಎಸ್.ಜೆ.ಎಂ. ಪ್ರಧಾನ ಕಾರ್ಯದರ್ಶಿ ಕೆ.ಕೆ.ಎಂ. ಕಾಮಿಲ್ ಸಖಾಫಿ ಹಾಗೂ ಕಿಕ್ಕರೆ ಜುಮಾ ಮಸೀದಿಯ ಆಡಳಿತ ಸಮಿತಿ ಅಧ್ಯಕ್ಷರಾದ ಕೆ.ವೈ. ಬಷೀರ್ ಶುಭ ಹಾರೈಸಿ ಮಾತನಾಡಿದರು. ಮುಹಿಯ್ಯದ್ದೀನ್ ಸಅದಿ ತೋಟ್ಟಾಲ್ ಸಭೆಯ ವೀಕ್ಷಕರಾಗಿ ಕಾರ್ಯನಿರ್ವಹಿಸಿದರು. ವಿಭಾಗವಾರು ವರದಿಗಳನ್ನು ಷಂಶುದ್ದೀನ್ ಅಮ್ಜದಿ (ಪರೀಕ್ಷಾ) ನೌಷಾದ್ ಲತೀಫಿ (ವೆಲ್ಫೇರ್) ನಝೀರ್ ಸಖಾಫಿ (ಮಿಶನರಿ) ಹಂಝ ರಹ್ಮಾನಿ (ಮ್ಯಾಗಝಿನ್) ಹಾಗೂ ಹಸೈನಾರ್ ಮುಸ್ಲಿಯಾರ್ (ಟ್ರೆöÊನಿಂಗ್) ಸಭೆಯಲ್ಲಿ ವರದಿ ಮಂಡಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಸಖಾಫಿ ವಾರ್ಷಿಕ ವರದಿ ಮತ್ತು ಫೈನಾನ್ಸ್ ಕಾರ್ಯದರ್ಶಿ ಅಬ್ದುಲ್ಲ ಸಖಾಫಿ ಕೊಳಕೇರಿ ಲೆಕ್ಕಪತ್ರ ಮಂಡಿಸಿದರು. ನೂತನ ಅಧ್ಯಕ್ಷರಾಗಿ ಅಬ್ದುಲ್ಲಾ ಸಖಾಫಿ ಕೊಳಕೇರಿ, ಪ್ರಧಾನ ಕಾರ್ಯದರ್ಶಿಯಾಗಿ ಷಂಶುದ್ದೀನ್ ಅಮ್ಜದಿ,ಕೋಶಾಧಿಕಾರಿಯಾಗಿ ಅಶ್ರಫ್ ಸಖಾಫಿ, ಮುನೀರ್ ಸಅದಿ ಹಾಗೂ ಹಂಝ ರಹ್ಮಾನಿ ಪರೀಕ್ಷಾ ಹಾಗೂ ವೆಲ್ಫೇರ್ ವಿಭಾಗಕ್ಕೆ ರಝಾಖ್ ಸಖಾಫಿ ಹಾಗೂ ಯಾಕೂಬ್ ರಝ್ವಿ, ಮ್ಯಾಗಝಿನ್ ವಿಭಾಗಕ್ಕೆ, ಹಸೈನಾರ್ ಮುಸ್ಲಿಯಾರ್ ಹಾಗೂ ನಝೀರ್ ಸಖಾಫಿ ಪಿಂಚಣಿ ವಿಭಾಗಕ್ಕೆ, ಮುಸ್ತಫ ಸಖಾಫಿ ಹಾಗೂ ರಝಾಖ್ ಸಅದಿ ಟ್ರೆöÊನಿಂಗ್ ಮತ್ತು ಮಿಶನರಿ ವಿಭಾಗಕ್ಕೆ, ಸಬಾಹ್ ಸಖಾಫಿ, ಜಅಫರ್ ಮಿಸ್ಬಾಹಿ, ಯೂನುಸ್ ಮರ್ಝುಖಿ, ಉನೈಸ್ ಸುಲ್ತಾನಿ, ಹಸೈನಾರ್ ಸಅದಿ, ಹಸೈನಾರ್ ಸಖಾಫಿ, ಕಬೀರ್ ಝುಹ್ರಿ, ಜಲೀಲ್ ಇಂದಾದಿ ಹಾಗೂ ನೌಷಾದ್ ಲತೀಫಿರವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

ಜಿಲ್ಲಾ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಅಶ್ರಫ್ ಸಖಾಫಿ ಸ್ವಾಗತಿಸಿ, ನೂತನ ಪ್ರಧಾನ ಕಾರ್ಯದರ್ಶಿ ಷಂಶುದ್ದೀನ್ ಅಮ್ಜದಿ ವಂದಿಸಿದರು.