ಕೂಡಿಗೆ, ಆ. ೨: ಜಿಲ್ಲೆಯಲ್ಲಿ ಈ ಸಾಲಿನಲ್ಲಿ ಅನೇಕ ಮಂದಿ ವರ್ಷಂಪ್ರತಿಯAತೆ ಶುಂಠಿ ಬೆಳೆಯನ್ನು ಬೆಳೆದಿದ್ದಾರೆ. ಶುಂಠಿ ಬಿತ್ತನೆ ಮಾಡಿ ಈಗಾಗಲೇ ೫ ತಿಂಗಳುಗಳು ಕಳೆದಿದ್ದು, ಈ ಸಾಲಿನಲ್ಲಿ ವಿಚಿತ್ರ ಬ್ಯಾಕ್ಟೀರಿಯಾ ಗಳಿಂದ ಶುಂಠಿ ಬೆಳೆಯಲ್ಲಿ ರೋಗ ಕಾಣಿಸಿಕೊಂಡು ಹಾಳಾಗುತ್ತಿರುವ ಹಿನ್ನೆಲೆ ಕುಶಾಲನಗರ ತಾಲೂಕು ವ್ಯಾಪ್ತಿಯ ಅನೇಕ ಮಂದಿ ರೈತರು ಶುಂಠಿ ಬೆಳೆಯನ್ನು ಕೀಳಲು ಆರಂಭಿಸಿದ್ದಾರೆ. ಈ ಸಾಲಿನಲ್ಲಿ ಉತ್ತಮವಾದ ಮಳೆಯಿಂದಾಗಿ ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಶುಂಠಿ ಬೆಳೆ ಉತ್ತಮವಾಗಿ ಬಂದಿದೆ, ಆದರೆ ಈ ಬಾರಿ ಹೊಸ ರೋಗದ ಭಾದೆ ಯಿಂದಾಗಿ ಶುಂಠಿ ಬೆಳೆಯ ಬುಡದಲ್ಲಿ ಒಣಗಿದ ಮಾದರಿಯಲ್ಲಿ ಶುಂಠಿಯು ಹುಳುಗಳಾಗುತ್ತಿರುವ ಹಿನ್ನೆಲೆಯಲ್ಲಿ ಜಮೀನಿನಿಂದ ಅನೇಕ ರೈತರು ಕೀಳಲು ಆರಂಭ ಮಾಡಿದ್ದಾರೆ.
ಬೆಲೆ ಕುಸಿತದ ನಡುವೆಯೂ ರೋಗ ಕಾಣಿಸಿಕೊಂಡ ಹಿನ್ನೆಲೆ ರೈತರು ಶುಂಠಿ ಬೆಳೆಯನ್ನು ಜಮೀನಿನಲ್ಲಿ ಬಿಟ್ಟರೆ ಇಡೀ ಜಮೀನಿನ ಬೆಳೆಗಳು ಹಾಳಾಗುತ್ತಿರುವ ಹಿನ್ನೆಲೆ ರೋಗ ಲಕ್ಷಣಗಳು ಕಂಡುಬರುತ್ತಿರುವ ಜಮೀನಿನಲ್ಲಿ ಶುಂಠಿ ಕೀಳಲು ಆರಂಭಿಸಿದ್ದಾರೆ.
- ಕೆ.ಕೆ. ನಾಗರಾಜಶೆಟ್ಟಿ.