ಗೋಣಿಕೊಪ್ಪಲು, ಆ. ೨: ಗೋಣಿಕೊಪ್ಪ ರೋಟರಿ ಕ್ಲಬ್ ವತಿಯಿಂದ ಪೊನ್ನಂಪೇಟೆಯ ಸಾಯಿಶಂಕರ್ ವಿದ್ಯಾಸಂಸ್ಥೆಯಲ್ಲಿ ರೋರ‍್ಯಾಕ್ಟ್ ಕ್ಲಬ್‌ನ ಸಹಯೋಗ ದೊಂದಿಗೆ ವನಮಹೋತ್ಸವ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಶಾಲೆಯ ಆವರಣದಲ್ಲಿ ಗಿಡ ನೆಡುವ ಮೂಲಕ ಪರಿಸರದ ಅಗತ್ಯತೆಯ ಬಗ್ಗೆ ರೊಟೇರಿಯನ್ ಡಾ. ಚಂದ್ರಶೇಖರ್ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸಿದರು. ಮುಂದಿನ ಪೀಳಿಗೆಗೆ ಪರಿಸರ ಉಳಿವಿಕೆಯ ಬಗ್ಗೆ ಬೆಳಕು ಚೆಲ್ಲಿದರು. ಗೋಣಿಕೊಪ್ಪ ರೋಟರಿ ಕ್ಲಬ್‌ನ ಅಧ್ಯಕ್ಷರಾದ ರೋ.ಪಿ.ಆರ್. ವಿಜಯ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿಗಳಾದ ಪ್ರಮೋದ್ ಕಾಮತ್, ರೋಟರಿ ಕ್ಲಬ್‌ನ ಸಹಾಯಕ ಗವರ್ನರ್ ದಿಲನ್ ಚಂಗಪ್ಪ, ಡಾ. ಚಂದ್ರಶೇಖರ್, ಕೆ.ಎಂ. ಕಾವೇರಪ್ಪ, ಸುಭಾಶ್, ಜಮುನಾ, ರೋರ‍್ಯಾಕ್ಟ್ ಕ್ಲಬ್‌ನ ಅಧ್ಯಕ್ಷರಾದ ಜಶ್ವಿನ್, ಕಾರ್ಯದರ್ಶಿ ದಿಯಲ್ ದೇಚಮ್ಮ, ಸಂಚಾಲಕ ಎ.ಜಿ. ಯಶಸ್ವಿನಿ ಸೇರಿ ದಂತೆ ವಿದ್ಯಾಸಂಸ್ಥೆಯ ಮುಖ್ಯೋಪಾ ಧ್ಯಾಯರು, ಹಿರಿಯ ಶಿಕ್ಷಕರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.