ನಾಪೋಕ್ಲು, ಆ. ೩: ಇಲ್ಲಿಗೆ ಸಮೀಪದ ಕೊಳಕೇರಿ ಆಯುಷ್ಮಾನ್ ಆರೋಗ್ಯ ಮಂದಿರಕ್ಕೆ ಎಸ್.ಎಸ್. ಫ್ರೆಂಡ್ಸ್ ಕೊಳಕೇರಿ ಗ್ರೂಪಿನ ವತಿಯಿಂದ ಉದಾರ ಕೊಡುಗೆ ನೀಡಲಾಯಿತು.
ಆಯುಷ್ಮಾನ್ ಆರೋಗ್ಯ ಮಂದಿರಕ್ಕೆ ಅವಶ್ಯಕವಾಗಿರುವ ಕುರ್ಚಿ ಬಗ್ಗೆ ಆರೋಗ್ಯ ಕೇಂದ್ರದ ಸಿಬ್ಬಂದಿ ಮನವಿ ಮಾಡಲಾಗಿತ್ತು. ಈ ಮನವಿಗೆ ಸ್ಪಂದಿಸಿದ ಎಸ್.ಎಸ್. ಫ್ರೆಂಡ್ಸ್ ಕೊಳಕೇರಿ ವತಿಯಿಂದ ೧೦ ಫೈಬರ್ ಕುರ್ಚಿಗಳನ್ನು ಉದಾರವಾಗಿ ಆಯುಷ್ಮಾನ್ ಆರೋಗ್ಯ ಮಂದಿರಕ್ಕೆ ನೀಡಲಾಯಿತು.
ಈ ಸಂದರ್ಭ ಆಯುಷ್ಮಾನ್ ಆರೋಗ್ಯ ಮಂದಿರ ಸಮುದಾಯ ಆರೋಗ್ಯ ಅಧಿಕಾರಿ ಛಾಯಾ ಬಿ.ಎಸ್.ಎಸ್. ಫ್ರೆಂಡ್ಸ್ ಗ್ರೂಪಿನ ಪ್ರಮುಖರಾದ ಜೆ, ಕೆ.ಎ. ಮೂಸ ಹಾಜಿ, ಸಿ.ಎ. ಮಹಮ್ಮದ್ ಹಾಜಿ, ಸಿ.ಎ. ರಸಾಕ್ ಮುಸ್ಲಿಯರ್, ಕೆ.ಎ. ಅಬ್ದುಲ್ಲ, ಪಿ.ಎಂ. ರಫೀಕ್ ಇನ್ನಿತರರು ಉಪಸ್ಥಿತರಿದ್ದರು.