ಮಡಿಕೇರಿ, ಆ. ೩: ೨೦೨೪-೨೫ ನೇ ಸಾಲಿನಲ್ಲಿ ನಗರದಲ್ಲಿ ಹೊಸದಾಗಿ ಮಂಜೂರಾಗಿರುವ ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಪ್ರಾರಂಭಿಸಲು ನಗರದೊಳಗೆ ಅಂದಾಜು ೧೦೦ ವಿದ್ಯಾರ್ಥಿಗಳು ವಾಸವಿರಲು ಮೂಲಭೂತ ಸೌಕರ್ಯ ಹೊಂದಿರುವAತಹ (ಶೌಚಾಲಯ, ಸ್ನಾನಗೃಹ, ಭೋಜನಾಲಯ, ಮಲಗುವ ಕೊಠಡಿ, ಅಡುಗೆ ಕೊಠಡಿ, ದಾಸ್ತಾನು ಕೊಠಡಿ) ಸುಸಜ್ಜಿತ ಕಟ್ಟಡವನ್ನು ಲೋಕೋಪಯೋಗಿ ಇಲಾಖೆಯವರು ನಿಗದಿಪಡಿಸುವ ಬಾಡಿಗೆ ದರದಲ್ಲಿ ಒದಗಿಸಲು ಆಸಕ್ತಿ ಇರುವ ಕಟ್ಟಡ ಮಾಲೀಕರು ಆಗಸ್ಟ್ ೧೫ ರೊಳಗೆ ಕಟ್ಟಡಕ್ಕೆ ಸಂಬAಧಿಸಿದ ದಾಖಲೆಗಳೊಡನೆ ಕಚೇರಿಗೆ ತಮ್ಮ ಒಪ್ಪಿಗೆ ಪತ್ರವನ್ನು ಸಲ್ಲಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಕೋರಿದ್ದಾರೆ.