ಕೂಡಿಗೆ, ಆ. ೩: ಕುಶಾಲನಗರ ಪುರಸಭೆ ವ್ಯಾಪ್ತಿಗೆ ಒಳಪಡುವ ಗೊಂದಿಬಸವನಹಳ್ಳಿ - ಸುಂದರನಗರ ಸಂಪರ್ಕ ರಸ್ತೆಯು ತೀರಾ ಹಾಳಾಗಿ ಕೆಸರುಮಯವಾಗಿದೆ. ಬೃಹತ್ ಗುಂಡಿಗಳಾಗಿ ಮಳೆ ನೀರು ತುಂಬಿಕೊAಡು ವಾಹನಗಳ ಸಂಚಾರಕ್ಕೆ, ವಿದ್ಯಾರ್ಥಿಗಳು, ಕಾರ್ಮಿಕರು ತಿರುಗಾಡಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗಿದೆ.
ಈ ರಸ್ತೆಯ ವ್ಯಾಪ್ತಿಯಲ್ಲಿ ೫೦ಕ್ಕೂ ಹೆಚ್ಚು ಕುಟುಂಬಗಳು ನೆಲೆಸಿದ್ದು ಇಲ್ಲಿನ ವಿದ್ಯಾರ್ಥಿಗಳು ಕುಶಾಲನಗರಕ್ಕೆ ಹೋಗುವ ಮಾರ್ಗವಾಗಿದೆ. ಅಲ್ಲದೆ ದಿನಂಪ್ರತಿ ನೂರಾರು ಕಾರ್ಮಿಕರು ಸಮೀಪದಲ್ಲಿರುವ ಕೂಡ್ಲೂರು ಕೈಗಾರಿಕಾ ಕೇಂದ್ರಕ್ಕೆ ತೆರಳುವ ಮುಖ್ಯ ರಸ್ತೆಯಿರುವ ಹಿನ್ನೆಲೆಯಲ್ಲಿ ಸಂಬAಧಿಸಿದವರು ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿ ರಸ್ತೆಯ ದುರಸ್ತಿಗೆ ಮುಂದಾಗಬೇಕೆAದು ಗ್ರಾಮಸ್ಥರು ಆಗ್ರಹಿಸಿದ್ದಾರೆ.