ಗೋಣಿಕೊಪ್ಪ ವರದಿ, ಆ. ೩: ಪೊನ್ನಂಪೇಟೆ ಸಾಯಿ ಶಂಕರ್ ವಿದ್ಯಾಸಂಸ್ಥೆ, ಪ್ರಶಾಂತಿ ನಿಲಯ, ಗೋಣಿಕೊಪ್ಪ ರೋಟರಿ ಸಂಸ್ಥೆಯ ಆಶ್ರಯದಲ್ಲಿ ರೋಟರಿ ಸಂಸ್ಥೆಗೆ ವಿದ್ಯಾರ್ಥಿಗಳ ಪದಗ್ರಹಣ ಮತ್ತು ವನಮೋತ್ಸವ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಿಗೆ ಬ್ಯಾಡ್ಜ್ ನೀಡಲಾಯಿತು. ಪದಗ್ರಹಣ ಬೋಧಿಸಲಾಯಿತು. ಡಾ. ಕೆ.ಎನ್. ಚಂದ್ರಶೇಖರ ವಿದ್ಯಾರ್ಥಿಗಳಿಗೆ ನಾಯಕತ್ವದ ಬಗ್ಗೆ ತಿಳಿಸಿದರು. ಹಿರಿಯರಾದ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಸಂಸ್ಥೆಯ ಅಧ್ಯಕ್ಷ ವಿಜಯ್, ಕಾರ್ಯದರ್ಶಿ ಪ್ರಮೋದ್ ಕಾಮತ್, ವಲಯ ಗವರ್ನರ್ ದಿಲನ್, ರೊಟೇರಿಯನ್ ಸುಭಾಷ್, ರೊಟೇರಿಯನ್ ಜಮುನಾ ತಿಮ್ಮಯ್ಯ ಮತ್ತು ರೊಟೇರಿಯನ್ ಕೆ.ಎಂ. ಕಾರ್ಯಪ್ಪ, ಪದಗ್ರಹಣ ಸಂಚಾಲಕಿ ಯಶಸ್ವಿನಿ ಇದ್ದರು. ರೇಷ್ಮಾ ನಿರೂಪಿಸಿ, ನಿರೀಕ್ಷೆ ಸ್ವಾಗತಿಸಿ, ಭವಾನಿ ವಂದಿಸಿದರು.