ಸುಂಟಿಕೊಪ್ಪ, ಆ. ೪: ಕೆದಕಲ್ ಬಳಿಯ ರಾಷ್ಟಿçÃಯ ಹೆದ್ದಾರಿಯಲ್ಲಿ ಶಾಲಾ ವಾಹನ ಹಾಗೂ ಸರಕು ಸಾಗಣೆ ಆಟೋರಿಕ್ಷಾದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸಣ್ಣಪುಟ್ಟ ಗಾಯಗಳಿಂದ ಚಾಲಕರು ಪಾರಾಗಿ ದ್ದಾರೆ. ಕೆದಕಲ್ ಕಡೆಯಿಂದ ಕೊಪ್ಪ ಕಡೆಗೆ ಆಗಮಿಸುತ್ತಿದ್ದ ಶಾಲಾ ಬಸ್ ಹಾಗೂ ಸುಂಟಿಕೊಪ್ಪದಿAದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಸರಕು ಸಾಗಣೆ ಆಟೋರಿಕ್ಷಾ (ಕೆಎ೧೯ ಎಈ ೦೧೫೧) ನಡುವೆ ಕೆದಕಲ್ ಬಳಿಯ ತಿರುವಿನಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳಿಂದ ಚಾಲಕರು ಪಾರಾಗಿದ್ದಾರೆ.