ವೀರಾಜಪೇಟೆ, ಆ. ೪: ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿ ವೀರಾಜಪೇಟೆ ಬ್ಲಾಕ್ ಅಲ್ಪಸಂಖ್ಯಾತರ ಘಟಕ ಉಪಾಧ್ಯಕ್ಷ ಹಬೀಬುಲ್ಲಾ ಶರೀಫ್ ಅವರು ಬೆಂಬಲಿಗರೊAದಿಗೆ ಶಾಸಕರು ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್ ಪೂನ್ನಣ್ಣ ಅವರನ್ನು ಶಾಸಕರ ಕಚೇರಿಯಲ್ಲಿ ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು. ಮುಸ್ಲಿಂ ಮುಖಂಡ ಹಾಗೂ ಪುರಸಭೆ ಸದಸ್ಯರಾದ ಮತೀನ್ ಎಸ್.ಹೆಚ್. ನೇತೃತ್ವದಲ್ಲಿ ಶಾಸಕರನ್ನು ಭೇಟಿಯಾಗಿ ಪ್ರಸ್ತುತ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರಲ್ಲಿ ಹನಫಿ ಎಂಬ ಪಂಗಡವಿದ್ದು, ನಮ್ಮ ಪಂಗಡಕ್ಕೆ ಇದುವರೆಗೆ ಯಾವುದೇ ಸೂಕ್ತ ಸ್ಥಾನಮಾನವನ್ನು ನೀಡಿಲ್ಲ ಎಂದು ಶಾಸಕರಿಗೆ ಮನವರಿಕೆ ಮಾಡಿದರು. ಮನವಿಗೆ ಸ್ಪಂದಿಸಿದ ಶಾಸಕರು ಇದರ ಬಗ್ಗೆ ಪರಿಶೀಲಿಸಿ ಆ ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ಆರಿಸುವುದಾಗಿ ಭರವಸೆ ನೀಡಿದರು.
ಕಾರ್ಯಕರ್ತ ರಾದ ಅಫ್ತಾಬ್ ಅತ್ತು, ಶಫಿ ಅಹಮದ್, ನಯಾಜ್, ಝಿಯಾಉಲ್ಲಾ, ಇಮ್ರಾನ್ ಮತ್ತಿತರರು ಉಪಸ್ಥಿತರಿದ್ದರು.