ಸೋಮವಾರಪೇಟೆ, ಆ.೪: ಕೊಟ್ಟಿದ್ದ ಸಾಲವನ್ನು ವಾಪಸ್ ಕೇಳಲು ತೆರಳಿದ ಸಂದರ್ಭ ಕುಸಿದು ಬಿದ್ದು ಮಹಿಳೆಯೋರ್ವರು ದುರ್ಮರಣಕ್ಕೀಡಾಗಿರುವ ಘಟನೆ ಇಂದುಸAಜೆ ಮಸಗೋಡು ಗ್ರಾಮದಲ್ಲಿ ನಡೆದಿದೆ. ಪಟ್ಟಣದ ರೇಂಜರ್ಸ್ ಬ್ಲಾಕ್ ನಲ್ಲಿ ನೆಲೆಸಿರುವ ಅಡುಗೆ ಕೃಷ್ಣ ಅವರ ಪತ್ನಿ ವನಜಾ(೬೪) ಎಂಬವರೇ ಮೃತಪಟ್ಟವರು. ಮಸಗೋಡು ಗ್ರಾಮದ ತೋಟದ ಮನೆಯಲ್ಲಿರುವ ಕುಟುಂಬವೊAದಕ್ಕೆ ವನಜ ಅವರು ಈ ಹಿಂದೆ ಸಾಲ ನೀಡಿದ್ದರು ಎನ್ನಲಾಗಿದೆ. ಇಂದು ಸಂಜೆ ಸಾಲವನ್ನು ವಾಪಸ್ ಕೇಳಲು ತೆರಳಿದ ಸಂದರ್ಭ ಕುಸಿದು ಬಿದ್ದಿದ್ದಾರೆ. ತಕ್ಷಣ ಆಟೋದಲ್ಲಿ ಪಟ್ಟಣದ ಆಸ್ಪತ್ರೆಗೆ ಕರೆತಂದಿದ್ದು, ಪರಿಶೀಲಿಸಿದ ವೈದ್ಯರು ಅಷ್ಟರಲ್ಲಾಗಲೇ ಮೃತಪಟ್ಟಿರುವ ಬಗ್ಗೆ ದೃಢೀಕರಿಸಿದ್ದಾರೆ. ಈ ಬಗ್ಗೆ ಮೃತರ ಪುತ್ರ ವಿನಿ ಅವರು ಪೊಲೀಸ್ ದೂರು ನೀಡಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಘಟನೆಯ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ. ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮೃತರು ಪತಿ ಕೃಷ್ಣ, ಸೋಮವಾರಪೇಟೆ ಪಟ್ಟಣ ಪಂಚಾಯಿತಿ ನಾಮನಿರ್ದೇಶಿತ ಸದಸ್ಯ ವಿನಿ ಸೇರಿದಂತೆ ಈರ್ವರು ಪುತ್ರರನ್ನು ಅಗಲಿದ್ದಾರೆ.