ಮಡಿಕೇರಿ, ಆ. ೪ : ಪೊನ್ನಂಪೇಟೆಯ ಸಂತ ಅಂತೋಣಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ನಮ್ಮ ನಡಿಗೆ ಗದ್ದೆ ಕಡೆಗೆ ಕಾರ್ಯಕ್ರಮದ ಪ್ರಯುಕ್ತ ಸ್ಥಳೀಯ ರೈತರಾದ ಶ್ರೀಪತಿ ಅವರ ಗದ್ದೆಗೆ ತೆರಳಿ ಉಳುಮೆ ಮಾಡುವ, ಪೈರು ಕೀಳುವ, ನಾಟಿ ನೆಡುವ ಬಗ್ಗೆ ಮಾಹಿತಿ ಪಡೆದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ರಜನಿ, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.