ಗೋಣಿಕೊಪ್ಪ ವರದಿ, ಆ. ೫: ಶ್ರೀಮಂಗಲ ವಿವೇಕ ಜಾಗ್ರತ ಬಳಗ ವತಿಯಿಂದ ಗೋಣಿಕೊಪ್ಪ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರ ನಡೆಯಿತು. ಸುಮಾರು ೪೦ ಜನರು ರಕ್ತದಾನ ಮಾಡಿದರು.
ಜಿಲ್ಲಾ ಮೆಡಿಕಲ್ ವಿಜ್ಞಾನ ಕಾಲೇಜು ರಕ್ತ ನಿಧಿ ಕೇಂದ್ರದಿAದ ರಕ್ತ ಸಂಗ್ರಹಿಸಲಾಯಿತು. ಜ್ಯೂಸ್ ಮತ್ತು ಹಣ್ಣುಗಳನ್ನು ವಿತರಿಸಲಾಯಿತು.
ಶ್ರೀಮಂಗಲ ವಿವೇಕ ಜಾಗೃತ ಬಳಗದ ಅಧ್ಯಕ್ಷ ಡಿ. ಎಸ್. ಕುಮಾರ್, ದಂತ ವೈದ್ಯ ಅರವಿಂದ್ ಇದ್ದರು.