ಸೋಮವಾರಪೇಟೆ, ಆ. ೫: ಇನ್ನರ್ ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಆಲೂರು ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಾಣಂತಿಯರಿಗೆ ಸ್ತನ್ಯಪಾನ ಮಹತ್ವ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ತನ್ಮಯಿ ಪ್ರವೀಣ್ ಕಾರ್ಯಕ್ರಮ ಉದ್ಘಾಟಿಸಿದರು. ತಾಯಿಗೆ ತಾಯ್ತನದ ಸಂಭ್ರಮ ಅತ್ಯಮೂಲ್ಯವಾದದು. ಪೌಷ್ಟಿಕಾಂಶ ಯುಕ್ತ ಆಹಾರವನ್ನು ಸೇವಿಸ ಬೇಕು. ಆರೋಗ್ಯವಂತ ಮಗುವನ್ನು ಈ ಸಮಾಜಕ್ಕೆ ನೀಡುವುದು ತಾಯಿಯ ಜವಾಬ್ದಾರಿಯೂ ಆಗಿದೆ ಎಂದು ಕಿವಿಮಾತು ಹೇಳಿದರು.
ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುಪರ್ಣ ಕೃಷ್ಣಾನಂದ ಮಾತನಾಡಿ, ನವಜಾತ ಶಿಶುಗಳಿಗೆ ತಾಯಿಯ ಎದೆಹಾಲೇ ಆಹಾರ ಮತ್ತು ಅಮೃತವಾಗಿದೆ.
ದೈಹಿಕ ಮತ್ತು ಸರ್ವತೋಮುಖ ಬೆಳವಣಿಗೆಗೆ ಬೇಕಾದ ಎಲ್ಲಾ ಪೌಷ್ಟಿಕಾಂಶಗಳು ಎದೆ ಹಾಲಿನಿಂದಲೇ ಸಿಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಾಣಂತಿ ಯರಿಗೆ ಬೆಡ್ಶಿಟ್ಗಳನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಕಾರ್ಯದರ್ಶಿ ಸುವಿನಾ ಕೃಪಾಲ್, ಉಪಾಧ್ಯಕ್ಷೆ ಲತಾಮಂಜು, ಮಾಜಿ ಅಧ್ಯಕ್ಷೆ ಸಂಗೀತ ದಿನೇಶ್, ಖಜಾಂಚಿ ಆಶಾ ಮೋಹನ್ ಪದಾಧಿಕಾರಿ ಗಳಾದ ನಂದಿನಿ ಗೋಪಾಲ್, ಸ್ಮಿತಾ ನವೀನ್, ಲತಾನಾಗೇಶ್, ಸುವiಲತಾ ಪುರುಷೋತ್ತಮ್ ಇದ್ದರು.