ಸುಂಟಿಕೊಪ್ಪ, ಆ. ೫: ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಆವರಣ ಕಿಡಿಗೇಡಿಗಳ ಮತ್ತು ಮದ್ಯಪ್ರಿಯರ ಆವಾಸ ಸ್ಥಾನವಾಗುತ್ತಿದ್ದು, ವಿದ್ಯಾ ದೇಗುಲ ಎನ್ನಿಸಿದ ಆವರಣ ಪಾಳು ಬಿದ್ದ ಕಟ್ಟಡವಾಗಿ ಪರಿವರ್ತನೆ ಯಾಗುತ್ತಿದೆ.

ಸುಂಟಿಕೊಪ್ಪ ಪಟ್ಟಣ ವ್ಯಾಪ್ತಿಯಲ್ಲಿ ಮಾತ್ರ ಈ ಸಮಸ್ಯೆ ಇರದೆ ಹೋಬಳಿಯಾದ್ಯಂತ ಕಾರ್ಯಾಚರಿಸುತ್ತಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಈ ಗಂಭೀರ ಸಮಸ್ಯೆ ಹೊರತಾಗಿಲ್ಲ ಇದಕ್ಕೆ ಮುಖ್ಯ ಕಾರಣ ಶಾಲೆಗಳಲ್ಲಿ ರಾತ್ರಿ ಕಾವಲುಗಾರರ ಕೊರತೆ ಮತ್ತು ನೇಮಕಾತಿ ಇಲ್ಲದೆ ಇರುವುದು ಹಾವಳಿ ಹೆಚ್ಚಾಗಲು ಕಾರಣವಾಗಿದೆ.

ಸರಕಾರಗಳು ದಿನಕ್ಕೊಂದು ಹೊಸ ರೀತಿಯ ಕಾನೂನು ಜಾರಿಗೆ ತರುವ ಮೂಲಕ ಸಮಸ್ಯೆ ಕಡಿವಾಣಕ್ಕೆ ಪ್ರಯತ್ನಿಸುತ್ತಿದೆ. ಮದ್ಯಪ್ರಿಯರು, ವಯೋವೃದ್ಧರು ಕೆಲವು ಗ್ರಾಮೀಣ ಭಾಗದ ಶಾಲೆಗಳನ್ನು ಆವಾಸ ಸ್ಥಾನವಾಗಿ ಮಾಡಿಕೊಂಡು ಶಿಕ್ಷಣ ನೀಡುವ ದೇಗುಲವನ್ನು ಶನಿವಾರ ಮತ್ತು ಭಾನುವಾರದ ದಿನಗಳಂದು ಮಲಿನಗೊಳಿಸುತ್ತಿರುವುದು ಹೆಚ್ಚಾಗಿ ಕಾಣಬಹುದಾಗಿದೆ. ಸೋಮವಾರದಂದು ಕೆಲವು ಶಾಲಾ ಶಿಕ್ಷಕರು ಅದನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡುವುದನ್ನು ಹಲವಷ್ಟು ಸಂದರ್ಭಗಳಲ್ಲಿ ಕಾಣಸಿಗುತ್ತಿದೆ. ಸರಕಾರ ಮತ್ತು ಸಂಬAಧಿಸಿದ ಇಲಾಖೆಯ ಅಧಿಕಾರಿಗಳು ಶಾಲೆ ಆವರಣದಲ್ಲಿ ಕಿಡಿಗೇಡಿಗಳ ಹಾವಳಿಯನ್ನು ತಡೆಗಟ್ಟಲು ಕ್ರಮವಹಿಸಲು ಶಾಲೆಗಳಲ್ಲಿ ಸಿಸಿ ಕ್ಯಾಮರ ಅಳವಡಿಸಲಾಗಿದ್ದರೂ ಅದನ್ನು ಹಾನಿಗೊಳಿಸುವ ಮೂಲಕ ವಿಕೃತ ಮನಸ್ಥಿತಿಯನ್ನು ಮೆರೆಯುತ್ತಿದ್ದಾರೆ.

ಸುಂಟಿಕೊಪ್ಪದಲ್ಲಿ ಸರಕಾರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯಿದೆ ಶತಮಾನೋತ್ಸವ ಪೂರೈಸಿದ ಈ ಶಾಲೆಗೆ ಹಳೇ ವಿದ್ಯಾರ್ಥಿ ಸಂಘವನ್ನು ಕಟ್ಟಿ ಈ ಶಾಲೆಯ ಕಟ್ಟಡದ ಪುನಶ್ಚೇತನಕ್ಕೆ ಉದ್ಯಮಿಗಳು, ಕಾಫಿ ಬೆಳೆಗಾರರು ಸೇರಿದಂತೆ ದಾನಿಗಳ ಮೂಲಕ ೧೩ ಲಕ್ಷಕ್ಕೂ ಮಿಕ್ಕಿ ವ್ಯಯಿಸಿ ಶಾಲೆಯ ಗೋಡೆ ಮೇಲ್ಚಾವಣಿ ಹಾಗೂ ಕಿಟಕಿ ಬಾಗಿಲುಗಳನ್ನು ದುರಸ್ತಿಗೊಳಿಸಲಾಗಿತ್ತು. ಇತಿಹಾಸ ಇರುವÀ ಈ ಶಾಲೆಗೆ ಹೊಸರೂಪ ನೀಡುವ ಖಾಸಗಿ ಶಾಲೆಗಳನ್ನು ಹಿಮ್ಮೆಟ್ಟಿಸುವ ರೀತಿಯಲ್ಲಿ ಶಾಲೆಯ ಪುನಶ್ಚೇತನಕ್ಕೆ ನಾಂದಿ ಹಾಡಿರುವುದು ಕಾಣಬಹುದಾಗಿದೆ. ಇದು ಜಿಲ್ಲೆಗೆ ಮಾದರಿ ಶಾಲೆಯಾಗಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ಶಾಲೆಗಳಿಗೆ ರಾತ್ರಿ ವೇಳೆ ಕಿಡಿಗೇಡಿಗಳ ಹಾವಳಿ ಹೆಚ್ಚಾಗಿದ್ದು ಶಾಲೆಯ ಪರಿಸರವನ್ನು ಧೂಮಪಾನ, ಮದ್ಯಪಾನ ಸೇರಿದಂತೆ ಅನೈತಿಕ ಚಟುವಟಿಕೆಗಳ ಮೂಲಕ ಮಲಿನಗೊಳಿಸುತ್ತಿದ್ದಾರೆ. ಸಂಬAಧಿಸಿದ ಅಧಿಕಾರಿಗಳು ಜನಪ್ರತಿನಿಧಿಗಳು ಚರ್ಚಿಸಿ ಶಾಲೆಗಳ ಶುಚಿತ್ವಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಶಾಲೆಗೆ ಕಾವಲುಗಾರರ ನೇಮಕ್ಕೆ ಮುಂದಾಗಲೆಬೇಕೆAಬುದು ಪೋಷಕರು ಹಾಗೂ ಸಾರ್ವಜನಿಕರ ಅಭಿಪ್ರಾಯವಾಗಿದೆ.

ಕಿಡಿಗೇಡಿಗಳ ಹಾವಳಿಯಿಂದ ಶಾಲಾ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಸರಕಾರವು ಸೂಕ್ತ ಭದ್ರತೆಯ ದಿಸೆಯಲ್ಲಿ ಕಟ್ಟಡಗಳಿಗೆ ಸೂಕ್ತ ಬಂದೋಬಸ್ತ್ ಮತ್ತು ಸೂಕ್ತವಾದ ಭದ್ರತೆಯನ್ನು ಒದಗಿಸಿ ವಠಾರದಲ್ಲಿ ಕಿಡಿಗೇಡಿಗಳ ಹಾವಳಿ ತಡೆಗೆ ಮುಂದಾಗಬೇಕೆAದು ಸುಂಟಿಕೊಪ್ಪ ಹೋಬಳಿ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ನಾಗೇಶ್ ಪೂಜಾರಿ ಅವರು ಹೇಳಿದ್ದಾರೆ.

ಸುಂಟಿಕೊಪ್ಪ ಸರಕಾರಿ ಪ್ರಾಥಮಿಕ ಪ್ರೌಢಶಾಲೆಯನ್ನು ಹಳೆಯ ವಿದ್ಯಾರ್ಥಿ ಸಂಘಟನೆಯವರು ಊರಿನ ಉದ್ಯಮಿಗಳು ಹಾಗೂ ದಾನಿಗಳ ಸಹಾಯ ಪಡೆದು ಲಕ್ಷಾಂತರ ರೂ. ವೆಚ್ಚ ಮಾಡಿ ಕಟ್ಟಡಗಳಿಗೆ ಸುಣ್ಣ ಬಣ್ಣ ಬಳಿದು ಸುಸಜ್ಜಿತಗೊಳಿಸಿದ್ದಾರೆ. ಆದರೆ ಕಿಡಿಗೇಡಿಗಳ ಹಾವಳಿಯಿಂದ ಶಾಲೆಯ ಕಟ್ಟಡವನ್ನು ವಿರೂಪಗೊಳಿಸುವುದಲ್ಲದೆ, ದುಶ್ಚಟಗಳ ಕೇಂದ್ರ, ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ.

ಸಂಬAಧಿಸಿದ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತ ಅಧಿಕಾರಿಗಳು ಈ ಬಗ್ಗೆ ಗಮನಹರಿಸುವುದು ಸೂಕ್ತ ಎಂದು ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ಆಗ್ರಹಿಸಿದ್ದಾರೆ.

- ರಾಜು ರೈ