ಸುಂಟಿಕೊಪ್ಪ, ಆ. ೫: ಭಾರೀ ಮಳೆ - ಗಾಳಿಯ ಪರಿಣಾಮ ಮನೆಯ ಮೇಲೆ ಮರ ಬಿದ್ದು ನಷ್ಟವುಂಟಾಗಿದ್ದ ಕೆಂಚೆಟ್ಟಿ ನಿವಾಸಿ ಎನ್.ಆರ್. ನಂಜಪ್ಪ ಅವರ ನಿವಾಸಕ್ಕೆ ಶಾಸಕ ಡಾ. ಮಂತರ್ ಗೌಡ ಭೇಟಿ ನೀಡಿ ಪರಿಶೀಲಿಸಿದರು.

ಕಂದಾಯ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಮಂತರ್, ನಷ್ಟಕ್ಕೆ ಸರಕಾರದಿಂದ ಪರಿಹಾರ ಒದಗಿಸುವ ಭರವಸೆ ನೀಡಿದರು.

ಈ ಸಂದರ್ಭ ತಹಶೀಲ್ದಾರ್ ಕಿರಣ್ ಗೌರಯ್ಯ, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ. ಶಶಿಧರ್, ಗ್ರಾ.ಪಂ. ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಸದಸ್ಯ ರಫೀಕ್‌ಖಾನ್, ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮಂಜುನಾಥ್, ಉಪತಹಶೀಲ್ದಾರ್ ಪ್ರಶಾಂತ್, ಸುಂಟಿಕೊಪ್ಪ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ ಉಷಾ ಹಾಗೂ ಸಹಾಯಕಿ ಗೀತಾ ಸೇರಿದಂತೆ ಮತ್ತಿತರರು ಇದ್ದರು.