ಕೊಡಗಿನಿAದ ೯ ರ‍್ಯಾಲಿ ಪಟುಗಳು ಭಾಗಿ
ಚೆಟ್ಟಳ್ಳಿ, ಆ. ೬: ಗೋವಾದಲ್ಲಿ ಆಯೋಜಿಸಲಾದ ೧೧ನೇ ಎಡಿಶನ್‌ನ ರೈನ್ ಫಾರೆಸ್ಟ್ ಚಾಲೆಂಜ್ ಇಂಡಿಯಾ-೨೦೨೫ರಲ್ಲಿ ಅತ್ಯುತ್ತಮ ಸಾಧನೆ ತೋರುವ ಮೂಲಕ ಅಮ್ಮತ್ತಿಯ ಉದ್ದಪಂಡ ಚೇತನ್ ಚಂಗಪ್ಪ ಸಮಗ್ರ ಚಾಂಪಿಯನ್ನಾಗಿ ಹೊರಹೊಮ್ಮಿದ್ದಾರೆ.
ಚೆಟ್ಟಳ್ಳಿಯ ಕೊಂಗೇಟಿರ ಬೋಪಯ್ಯ ಹಾಗೂ ಮಾಳೆಯಂಡ ಬೋಪಣ್ಣ ಜೋಡಿ ಸ್ಟಾಕ್ ಕ್ಯಾಟಗರಿಯಲ್ಲಿ ದ್ವಿತೀಯ, ಹಂಚೆಟ್ಟೀರ ಪ್ರಾರ್ಥನ್ ಚಿಟ್ಯಯಪ್ಪ ತೃತೀಯ ಹಾಗೂ ಡೀಸೆಲ್ ಕ್ಯಾಟಗರಿಯಲ್ಲಿ ಕಂಬೀರAಡ ಮಯೂರ್ ಬೋಪಯ್ಯ ಎರಡನೇ ಸ್ಥಾನ ಪಡೆದಿದ್ದಾರೆ.
ಈ ರೈನ್‌ಫಾರೆಸ್ಟ್ ಚಾಲೆಂಜ್ ಪ್ರಪಂಚದಾದ್ಯAತ ಅನೇಕ ದೇಶಗಳಲ್ಲಿ ನಡೆಯುವ ಗ್ಲೋಬಲ್ ಸರಣಿ ಈವೆಂಟ್‌ಗಳ ಭಾಗವಾಗಿದ್ದು ಅತ್ಯಂತ ಕಠಿಣಕರ, ಉದ್ದವಾದ, ದೊಡ್ಡ ಮತ್ತು ಪ್ರತಿಷ್ಠಿತ ಆಫ್-ರೋಡ್ ಚಾಲನಾ ಮೋಟಾರ್ ಸ್ಟೋರ್ಟ್ಸ್ನಲ್ಲಿ ಒಂದಾಗಿದೆ. ಇದರಲ್ಲಿ `ಸ್ಪೆಷಲ್ ಸ್ಟೇಜಸ್' ಎಂದು ಕರೆಯಲ್ಪಡುವ ಬಹು ಆಫ್ರೋಡ್ ಸವಾಲುಗಳನ್ನು ಎದುರಿಸಬೇಕಿದೆ. ಜಯಿಸಲು ಒಂದು ವಾರದಲ್ಲಿ ವಿಶೇಷವಾಗಿ ಸಿದ್ಧಪಡಿಸಲಾದ ೪-ವೀಲ್ ಡ್ರೆöÊವ್ ವಾಹನಗಳಲ್ಲಿ ಹಲವು ದೇಶಗಳ ಆಫ್-ರೋಡರ್‌ಗಳು ಭಾಗವಹಿಸಿದ್ದಾರೆ. ಮಾನ್ಸೂನ್‌ನಲ್ಲಿ ಗೋವಾದ ಒಳನಾಡಿನಲ್ಲಿ ಅಪಾಯಕಾರಿ ಇಳಿಜಾರುಗಳು, ದಟ್ಟವಾದ ಕಾಡುಗಳು ಮತ್ತು ಆಳವಾದ ಮಣ್ಣಿನ ಇಳಿಜಾರಿನಂತೆ ಟ್ರಾö್ಯಕ್ ಪ್ರಸ್ತುತಪಡಿಸಲಾಗಿದೆ.
೪x೪ ಎಕ್ಸಿ÷್ಟÃಮ್, ೪x೪ ಮೋಡಿಫೈಡ್ ಹಾಗೂ ೪x೪ ಸ್ಟಾಕ್ ಕ್ಯಾಟಗರಿಗಳಲ್ಲಿ ಒಟ್ಟು ೭೭ ತಂಡಗಳು ಭಾಗಿಗಳಾಗಿದ್ದವು. ಎಕ್ಸಿ÷್ಟÃಮ್, ಕ್ಯಾಟಗರಿಯಲ್ಲಿ ೨೬ ಹಂತಗಳಿದ್ದು ಅದರಲ್ಲಿ ಅರುಣಾಚಲ ಪ್ರದೇಶದ ಚವೌ ಉಜ್ಜಲ್ ನಮ್‌ಸುಮ್ ಹಾಗೂ ಉದ್ದಪಂಡ ಚೇತನ್ ಚಂಗಪ್ಪ ಜೋಡಿ ಓವರಾಲ್‌ನಲ್ಲಿ ಚಾಂಪಿಯನ್ ಆದರು, ಸ್ಟಾಕ್ ಕ್ಯಾಟಗರಿಯಲ್ಲಿ ಚೆಟ್ಟಳ್ಳಿಯ ಕೊಂಗೇಟಿರ ಬೋಪಯ್ಯ ಹಾಗೂ ಮಾದಾಪುರದ ಮಾಳೆಯಂಡ ಬೋಪಣ್ಣ ಜೋಡಿ ದ್ವಿತೀಯ ಸ್ಥಾನ ಹಾಗೂ ಕುಶಾಲನಗರದ ಹಂಚೆಟ್ಟಿರ ಪ್ರಾರ್ಥನ್ ಚಿಟ್ಯಯಪ್ಪ ತೃತೀಯ, ಡಿಸೇಲ್ ಕ್ಯಾಟಗರಿಯಲ್ಲಿ ಮೂರ್ನಾಡಿನ ಕಂಬೀರAಡ ಮಯೂರ್ ಬೋಪಯ್ಯ ಎರಡನೇ ಸ್ಥಾನ ಪಡೆದು ಸಾಧನೆ ಗೈದಿದ್ದಾರೆ.
ಇವರ ಜೊತೆಗೆ ಕೊಡಗಿನಿಂದ ಸಿಬಿಪೋಲ್, ಉದ್ದಪಂಡ ತಿಮ್ಮಣ್ಣ, ಪುಚ್ಚಂಡ ಸುಜೀತ್ ಚಂಗಪ್ಪ, ಬಾಚಮಂಡ ಅಪ್ಪಣ್ಣ ಅವರು ಭಾಗವಹಿಸಿದ್ದರು. ಓವರಾಲ್ ಚಾಂಪಿಯನ್‌ಶಿಪ್ ಪಡೆದ ಉದ್ದಪಂಡ ಚೇತನ್ ಚಂಗಪ್ಪ ಹಾಗೂ ಚವೌ ಉಜ್ಜಲ್ ನಮ್‌ಸುಮ್ ಜೋಡಿ ನವೆÀಂಬರ್‌ನಲ್ಲಿ ಮಲೇಶಿಯಾದಲ್ಲಿ ನಡೆಯುವ ರೇನ್ ಫಾರೆಸ್ಟ್ ಮದರ್ ಈವೆಂಟ್‌ನಲ್ಲಿ ಭಾಗವಹಿಸಲು ಆಯ್ಕೆಗೊಂಡರು. - ಪುತ್ತರಿರ ಕರುಣ್ ಕಾಳಯ್ಯ