ಸೋಮವಾರಪೇಟೆ, ಆ. ೬: ತಾಲೂಕು ಪುಷ್ಪಗಿರಿ ಛಾಯಾಗ್ರಾಹಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪಟ್ಟಣದ ಮಹಿಳಾ ಸಮಾಜದಲ್ಲಿ ನಡೆಯಿತು.
ಸಂಘದ ನಿಕಟಪೂರ್ವ ಉಪಾಧ್ಯಕ್ಷ ವಿ. ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಸಾಲಿಗೆ ಪದಾಧಿಕಾರಿಗಳನ್ನು ನೇಮಿಸಲಾಯಿತು. ಸಂಘದ ಅಧ್ಯಕ್ಷರಾಗಿ ಸಾಲೊಮನ್ ಡೇವಿಡ್, ಗೌರವಾಧ್ಯಕ್ಷರಾಗಿ ಎನ್.ಜಿ. ಜನಾರ್ಧನ್, ಉಪಾಧ್ಯಕ್ಷರಾಗಿ ದೀಪು, ಪ್ರಧಾನ ಕಾರ್ಯದರ್ಶಿಯಾಗಿ ಅಭಿಲಾಶ್, ಖಜಾಂಚಿಯಾಗಿ ಅರುಣ್ ಕುಮಾರ್, ನಿರ್ದೇಶಕರಾಗಿ ರಾಜು, ಮಂಜುನಾಥ್, ಸಲೀಂ, ಕೀರ್ತಿ, ನವೀನ್ ಅವರುಗಳು ಆಯ್ಕೆಯಾದರು. ಜಿಲ್ಲಾ ಸಂಘದ ನಿರ್ದೇಶಕರಾಗಿ ಹರೀಶ್ ಕೋಟ್ಯಾನ್, ಚಂದನ ಸುಬ್ರಮಣಿ, ಕೀರ್ತಿ, ಅಭಿಲಾಶ್ ಅವರುಗಳನ್ನು ನೇಮಿಸಲಾಯಿತು.