ಸುಂಟಿಕೊಪ್ಪ, ಆ. ೬: ನಾರ್ಗಾಗೆ ಗ್ರಾಮದ ಶ್ರೀ ಅಣ್ಣಪ್ಪಸ್ವಾಮಿ ದೇವಾಲಯದ ೧೨ನೇ ವರ್ಷದ ಗೌರಿಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಎಂ.ಜೆ. ಆಕಾಶ್, ಪ್ರಧಾನ ಕಾರ್ಯ ದರ್ಶಿಯಾಗಿ ಕಿರಣ್ ಆಯ್ಕೆಗೊಂಡರು.

ಉಪಾಧ್ಯಕ್ಷರಾಗಿ ಕಾರ್ತಿಕ್, ಸಹಕಾರ್ಯದರ್ಶಿಯಾಗಿ ಸುಧಿ, ಖಜಾಂಚಿಯಾಗಿ ಮೋಹನ್, ಸಹ ಖಜಾಂಚಿಯಾಗಿ ಬಿ.ಕೆ. ರಾಜೇಶ್ ಹಾಗೂ ಸಮಿತಿ ಸದಸ್ಯರುಗಳಾಗಿ ೭೭ ಮಂದಿಯನ್ನು ಆಯ್ಕೆಗೊಳಿಸಲಾಯಿತು. ಹಿಂದಿನ ಸಾಲಿನ ಅಧ್ಯಕ್ಷ ಪುನಿತ್‌ಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.