ಶನಿವಾರಸಂತೆ, ಆ. ೬: ಶನಿವಾರಸಂತೆ ಗ್ರಾಮ ಪಂಚಾಯಿತಿಗೆ ಕೇಂದ್ರ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಿರುವ ಬಗ್ಗೆ ಪರಿಶೀಲನೆ ನಡೆಸಲು ರಾಷ್ಟçಮಟ್ಟದ ಮೇಲ್ವಿಚಾರಣಾ ತಂಡ ಭೇಟಿ ನೀಡಿತು.
ಸಭೆಯಲ್ಲಿ ಮಹಾತ್ಮಗಾಂಧಿ ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡಿರುವ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳ ಕಡತಗಳು ಸೇರಿದಂತೆ ಇನ್ನಿತರ ದಾಖಲೆ ಪರಿಶೀಲಿಸಿದರು. ನಂತರ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿ, ವೈಯಕ್ತಿಕ ಕಾಮಗಾರಿ ಪಡೆದುಕೊಂಡಿರುವ ಫಲಾನು ಭವಿಗಳೊಂದಿಗೆ ಚರ್ಚಿಸಿದರು.
ಆನಂತರ ಹೌಸಿಂಗ್, ಎನ್.ಆರ್.ಎಲ್.ಎಂ. ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿದರು. ಈ ಸಂದರ್ಭ ಪಂಚಾಯಿತಿ ಅಧ್ಯಕ್ಷೆ ಗೀತಾ ಹರೀಶ್, ಸದಸ್ಯರುಗಳಾದ ಎಸ್.ಸಿ. ಶರತ್ ಶೇಖರ್, ಎಸ್.ಆರ್. ಮಧು, ಸರೋಜಾ ಶೇಖರ್, ಕಾವೇರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್, ಹೌಸಿಂಗ್ ನೋಡೆಲ್ ಅಧಿಕಾರಿ, ನರೇಗಾ ಯೋಜನೆ ತಾಲೂಕು ಸಹಾಯಕ ನಿರ್ದೇಶಕ ರಾಕೇಶ್, ತಾಂತ್ರಿಕ ಸಹ ನಿರ್ದೇಶಕರಾದ ರಂಜಿತ್, ಅರುಣ್, ಇಲಾಖಾ ಅಧಿಕಾರಿಗಳು, ಎನ್.ಆರ್.ಎಲ್.ಎಂ. ಜಿಲ್ಲಾ ಮತ್ತು ತಾಲೂಕು ಸಿಬ್ಬಂದಿ, ಕಂದಾಯ ಇಲಾಖೆ ಅಧಿಕಾರಿಗಳು, ಸ್ವಸಹಾಯ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.