ಕೆಲವೆಡೆಗಳಲ್ಲಿ ಕೊರತೆ * ಪ್ರಸ್ತುತ ಒಂದಷ್ಟು ಕಡೆ ದಾಸ್ತಾನು * ಹೆಚ್ಚುತ್ತಿರುವ ಬೇಡಿಕೆ

ಮಡಿಕೇರಿ, ಆ. ೮: ಪ್ರಸ್ತುತ ರಾಜ್ಯಾದ್ಯಂತ ಯೂರಿಯಾ ರಸಗೊಬ್ಬರದ ಕೊರತೆಯ ಕುರಿತು ಭಾರೀ ಚರ್ಚೆಗಳು ನಡೆಯುತ್ತಿದ್ದು ಪ್ರತಿಭಟನೆಯೂ ಅಲ್ಲಲ್ಲಿ ನಡೆಯುತ್ತಿದೆ. ಈ ರಸಗೊಬ್ಬರಕ್ಕೆ ಅಧಿಕ ಬೇಡಿಕೆಯಿದ್ದು ಗೊಬ್ಬರದ ಕೊರತೆ ರಾಜ್ಯದಲ್ಲಿ ಕಂಡುಬAದಿದ್ದು ರಾಜಕೀಯವಾಗಿಯೂ ಆಡಳಿತ - ವಿಪಕ್ಷಗಳು ಆರೋಪ ಪ್ರತ್ಯಾರೋಪ ಮಾಡುತ್ತಿವೆ.

ಈ ಹಿನ್ನೆಲೆಯಲ್ಲಿ ‘ಶಕ್ತಿ’ ಕೊಡಗಿನಲ್ಲಿ ಯೂರಿಯಾ ರಸಗೊಬ್ಬರದ ಲಭ್ಯತೆ - ಬೇಡಿಕೆಯ ಕುರಿತಾಗಿ ವಿವಿಧೆಡೆಯಿಂದ ಮಾಹಿತಿ ಸಂಗ್ರಹಿಸಿತು. ಪ್ರಸ್ತುತ ಜಿಲ್ಲೆಯಲ್ಲಿ ಈ ಗೊಬ್ಬರಕ್ಕೆ ಸಂಬAಧಿಸಿದAತೆ ಹೆಚ್ಚಿನ ಸಮಸ್ಯೆ ಕಂಡುಬAದಿಲ್ಲ. ಕೆಲವೆಡೆ ಒಂದಷ್ಟು ದಾಸ್ತಾನು ಇದ್ದರೆ, ಒಂದೆರಡು ವಿಭಾಗಗಳಲ್ಲಿ ಕೊರತೆಯಿದ್ದು ಬೇಡಿಕೆ ಹೆಚ್ಚಾಗುತ್ತಿದೆ. ದಾಸ್ತಾನು ಇರುವ ಕೆಲವು ಸಂಘಗಳು - ವ್ಯಾಪಾರಿಗಳು ರೈತರಿಗೆ ಇಂತಿಷ್ಟು ಮಾತ್ರ ಎಂಬAತೆ ನಿರ್ದಿಷ್ಟ ಪ್ರಮಾಣದಲ್ಲಿ ಗೊಬ್ಬರವನ್ನು ಒದಗಿಸುತ್ತಿದೆ.

ಇದೀಗ ರೈತರು - ಬೆಳೆಗಾರರಿಂದ ಬೇಡಿಕೆ ಹೆಚ್ಚುತ್ತಿದ್ದು ಮುಂದಿನ ದಿನಗಳಲ್ಲಿ ಕೊರತೆ ಎದುರಾಗುವ ಸಂಭವವೂ ಇದೆ. ಜಿಲ್ಲೆಯ ಕೆಲವು ಸಹಕಾರ ಸಂಘಗಳು ಗೊಬ್ಬರ ವ್ಯಾಪಾರದ ಮಳಿಗೆಗಳಲ್ಲಿನ ವಾಸ್ತವತೆಯ ಕುರಿತು ಪತ್ರಿಕೆ ಸಂಗ್ರಹಿಸಿರುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ವೀರಾಜಪೇಟೆ

ವೀರಾಜಪೇಟೆ : ವೀರಾಜಪೇಟೆ ತಾಲೂಕಿನ ಫೆಡರೇಷನ್‌ನಲ್ಲಿ ಗೊಬ್ಬರದ ಸಮಸ್ಯೆ ಇಲ್ಲವೆಂದು ಹಾಗೂ ೯೦೦ ಬ್ಯಾಗ್ ಯೂರಿಯಾ ಗೊಬ್ಬರ ದಾಸ್ತಾನು ಇದ್ದು ಯಾವುದೇ ಸಮಸ್ಯೆ ಇಲ್ಲ. ಉಳಿದಂತೆ ಇತರ ಗೊಬ್ಬರಗಳು ದಾಸ್ತಾನು ಇದ್ದು ರೈತರಿಗೆ ಯಾವುದೇ ಗೊಬ್ಬರದ ಅಭಾವ ಇಲ್ಲ ಎಂದು ಫೆಡರೇಷನ್ ಸಿಒ ಮಾಹಿತಿ ನೀಡಿದರು. ಹಾಗೆಯೇ ವೀರಾಜಪೇಟೆಯಲ್ಲಿರುವ ಎಪಿಸಿಎಂಎಸ್‌ನಲ್ಲೂ ಕೂಡ ೪೫೦ ಬ್ಯಾಗ್ ಯೂರಿಯ ಗೊಬ್ಬರ ದಾಸ್ತಾನಿದೆ. ಡಿಎಪಿ ಗೊಬ್ಬರದ ಕೊರತೆ ಇದೆ ಉಳಿದ ಎಲ್ಲಾ ಗೊಬ್ಬರಗಳು ಲಭ್ಯವಿದೆ ಎಂದು ಎಪಿಸಿ ಎಂಎಸ್‌ನ ಅಧ್ಯಕ್ಷ ಕುಂಬೆರ ಮನು ಕುಮಾರ್ ಮಾಹಿತಿ ನೀಡಿದರು.

ಸಿದ್ದಾಪುರ

ಸಿದ್ದಾಪುರ : ಸಿದ್ದಾಪುರದ ಗುಹ್ಯ ಅಗಸ್ತ್ಯೇಶ್ವರ ಪ್ರಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ನೆಲ್ಲಿಹುದಿಕೇರಿ ಗ್ರಾಮದ ಅಭ್ಯತ್‌ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಯೂರಿಯ ಗೊಬ್ಬರಗಳು ದಾಸ್ತಾನು ಇದ್ದು ಯಾವುದೇ ಸಮಸ್ಯೆಗಳು ಇಲ್ಲವೆಂದು ತಿಳಿಸಿದ್ದಾರೆ. ಮತ್ತಷ್ಟು ಗೊಬ್ಬರಗಳಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದು ಮುಂದಿನ ವಾರದಲ್ಲಿ ದಾಸ್ತಾನು ಬರಲಿದೆ ಎಂದು ಮಾಹಿತಿ ನೀಡಿದರು.

* ಸಿದ್ದಾಪುರದ ಫೆಡರೇಶನ್‌ನ ಗೋದಾಮಿನಲ್ಲಿ ಯೂರಿಯಾ ಗೊಬ್ಬರ ೩೭೦ ಚೀಲಗಳು ದಾಸ್ತಾನು ಇದ್ದು ಗೊಬ್ಬರದ ಸಮಸ್ಯೆ ಇಲ್ಲವೆಂದು ಫೆಡರೇಶನ್ ವ್ಯವಸ್ಥಾಪಕರು ಮಾಹಿತಿ ನೀಡಿದ್ದಾರೆ.

ಮಾಲ್ದಾರೆ

ಸಿದ್ದಾಪುರ : ಸಿದ್ದಾಪುರ ಸಮೀಪದ. ಮಾಲ್ದಾರೆ ಗ್ರಾಮದ ಬಾಡಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಯೂರಿಯಾ ಗೊಬ್ಬರದ ಸಮಸ್ಯೆ ಇಲ್ಲವೆಂದು ಹಾಗೂ ಗೊಬ್ಬರ ದಾಸ್ತಾನು ಇದ್ದು ಯಾವುದೇ ಸಮಸ್ಯೆ ಇಲ್ಲ ಎಂದು ಸಹಕಾರ ಸಂಘದ ಅಧ್ಯಕ್ಷ ನಂದ ಸುಬ್ಬಯ್ಯ ತಿಳಿಸಿದ್ದಾರೆ. ತಿತಿಮತಿ

ತಿತಿಮತಿ : ತಿತಿಮತಿ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮಿನಲ್ಲಿ ೩೬೯ ಚೀಲ ಯೂರಿಯ ಗೊಬ್ಬರ ದಾಸ್ತಾನು ಇದೆ. ಈಗಾಗಲೇ ರೈತರಿಗೆ ಬೇಡಿಕೆ ಅನುಗುಣವಾಗಿ ವಿತರಣೆಯಾಗಿದೆ. ಮತ್ತಷ್ಟು ಗೊಬ್ಬರಕ್ಕೆ ಪ್ರಸ್ತಾಪನೆ ಸಲ್ಲಿಸಲಾಗಿದೆ. ರೈತರಿಗೆ ಸಮಸ್ಯೆ ಆಗದಂತೆ ಗೊಬ್ಬರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಹಕಾರ ಸಂಘದ ಅಧ್ಯಕ್ಷ ಚೆಪ್ಪುಡಿರ ರಾಮಕೃಷ್ಣ ಮಾಹಿತಿ ನೀಡಿದ್ದಾರೆ.ಸುಂಟಿಕೊಪ್ಪ

ಸುAಟಿಕೊಪ್ಪ : ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ೬೬೯ ಚೀಲಯೂರಿಯ ಗೊಬ್ಬರ ದಾಸ್ತಾನು ಇದ್ದು ಯಾವುದೇ ಸಮಸ್ಯೆ ಇಲ್ಲವಾಗಿದೆ ಮತ್ತಷ್ಟು ಗೊಬ್ಬರಕ್ಕೆ ಪ್ರಸ್ತಾಪನೆ ಸಲ್ಲಿಸಲಾಗಿದೆ ಎಂದು ಕೃಷಿ ಪತ್ತಿನ ಸಂಘದ ಮೂಲಕ ತಿಳಿದು ಬಂದಿದೆ.

ಸುAಟಿಕೊಪ್ಪ

ಸುAಟಿಕೊಪ್ಪ : ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ೬೬೯ ಚೀಲಯೂರಿಯ ಗೊಬ್ಬರ ದಾಸ್ತಾನು ಇದ್ದು ಯಾವುದೇ ಸಮಸ್ಯೆ ಇಲ್ಲವಾಗಿದೆ ಮತ್ತಷ್ಟು ಗೊಬ್ಬರಕ್ಕೆ ಪ್ರಸ್ತಾಪನೆ ಸಲ್ಲಿಸಲಾಗಿದೆ ಎಂದು ಕೃಷಿ ಪತ್ತಿನ ಸಂಘದ ಮೂಲಕ ತಿಳಿದು ಬಂದಿದೆ.

ಕೂಡಿಗೆ ಸಹಕಾರ ಸಂಘಕ್ಕೆ ಯೂರಿಯಾ ಗೊಬ್ಬರದ ಬೇಡಿಕೆ

ಕೂಡಿಗೆ : ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಈಗಾಗಲೇ ಅಧಿಕವಾಗಿ ಯೂರಿಯಾ ಗೊಬ್ಬರವು ಮಾರಾಟವಾಗುತ್ತಿರುವ ಹಿನ್ನೆಲೆ ಯೂರಿಯಾ ಗೊಬ್ಬರದ ಬೇಡಿಕೆಯು ಇದೆ.

ಸಹಕಾರ ಸಂಘದಲ್ಲಿ ಈಗಾಗಲೇ ದಾಸ್ತಾನು ಇದ್ದ ಒಂದು ಲಾರಿ ಮೂಟೆಗಳು ಕಳೆದ ತಿಂಗಳುಗಳಲ್ಲಿ ರೈತರಿಗೆ ಮಾರಾಟವಾಗಿವೆ. ಅಲ್ಲದೆ ಇದೀಗ ಸಹಕಾರ ಸಂಘದ ಗೋದಾಮಿನ ಬೇರೆ ಬೇರೆ ರಾಸಾಯನಿಕ ಗೊಬ್ಬರದ ಜೊತೆಯಲ್ಲಿ ಯೂರಿಯಾ ಗೊಬ್ಬರವು ಎರಡೂ ಲಾರಿ ಚೀಲಗಳಷ್ಟು ದಾಸ್ತಾನು ಇದೆ. ಈಗಾಗಲೇ ಸಹಕಾರ ಸಂಘದ ವ್ಯಾಪ್ತಿಯ ೧೪. ಗ್ರಾಮಗಳ ರೈತರು ತಮ್ಮ ಬೆಳೆಗೆ ಅನುಗುಣವಾಗಿ ಯೂರಿಯಾ ಗೊಬ್ಬರವನ್ನು ಖರೀದಿಸಿ ಹಾಕುತ್ತಿದ್ದಾರೆ ಎಂದು ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ತಿಳಿಸಿದ್ದಾರೆ.

ಕುಶಾಲನಗರ ತಾಲೂಕು ವ್ಯಾಪ್ತಿಯ ಆರೆ ಮಲೆನಾಡು ಪ್ರದೇಶವಾಗಿದ್ದು, ಈ ಭಾಗದಲ್ಲಿ ಹೆಚ್ಚು ಮಳೆಯನ್ನೇ ಅವಲಂಬಿಸಿ ನೂರಾರು ರೈತರು ಮೆಕ್ಕೆಜೋಳ ಬೆಳೆಯುವುದರಿಂದ, ಜೋಳಕ್ಕೆ ಯೂರಿಯಾ ಗೊಬ್ಬರದ ಅವಶ್ಯಕತೆಯು ಇರುವುದರಿಂದಾಗಿ ಮುಂಜಾಗ್ರತಾ ಕ್ರಮಗಳನ್ನು ಸಹಕಾರ ಸಂಘವು ವಹಿಸಿಕೊಂಡು ರಾಮೇಶ್ವರ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘವು ನೇರವಾಗಿ ಗೊಬ್ಬರ ಉತ್ಪಾದನಾ ಕೇಂದ್ರದ ಮೂಲಕ ತರಿಸಿಕೊಳ್ಳುವ ವ್ಯವಸ್ಥೆಯನ್ನು ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಅದಕ್ಕೆ ಸಂಬAಧಿಸಿದ ಮುಂಗಡ ಹಣವನ್ನು ಪಾವತಿಸಿ ರೈತರಿಗೆ ತೊಂದರೆಗಳು ಆಗದಂತೆ ಯೂರಿಯಾ ಗೊಬ್ಬರವನ್ನು ವಿತರಣೆ ಮಾಡಲಾಗುತ್ತಿದೆ ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾಹಿತಿ ನೀಡಿರುತ್ತಾರೆ.ಚೆಯ್ಯಂಡಾಣೆಯಲ್ಲಿ ಅಲಭ್ಯ

ಚೆಯ್ಯಂಡಾಣೆ : ಚೆಯ್ಯಂಡಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸದ್ಯದ ಮಟ್ಟಿಗೆ ಪ್ರಸ್ತುತ ಯೂರಿಯಾ ಗೊಬ್ಬರ ಲಭ್ಯವಿರುವುದಿಲ್ಲ. ರೈತರಿಂದ ಇನ್ನಷ್ಟು ಬೇಡಿಕೆ ಇದೆ. ಆದರೆ ಕಂಪನಿಗಳು ಯೂರಿಯಾ ಸರಬರಾಜು ಮಾಡುತ್ತಿಲ್ಲ ಎಂದು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ತಿಳಿಸಿದ್ದಾರೆ.

ಐಗೂರು

ಐಗೂರು : ಐಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ೨೦೦ ಚೀಲ ಯೂರಿಯಾ ಗೊಬ್ಬರ ದಾಸ್ತಾನು ಇದೆ. ೧೦೦೦ ಚೀಲ ಗೊಬ್ಬರ ಬೇಡಿಕೆ ಇದ್ದು, ಇಂಡೆAಟ್ ಹಾಕಿ ಕಳುಹಿಸಲಾಗಿದೆ ಎಂದು ಕಾರ್ಯ ನಿರ್ವಹಣಾಧಿಕಾರಿ ಡಿಕ್ಕಿರಾಜು ಅವರು ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ರಸಗೊಬ್ಬರ ಅಗತ್ಯ ದಾಸ್ತಾನು; ಚಂದ್ರಶೇಖರ್

ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರು ಕೃಷಿ ಚಟುವಟಿಕೆಗಳಲ್ಲಿ ತಲ್ಲೀನರಾಗಿರುತ್ತಾರೆ. ಪ್ರಸ್ತುತ ಜಿಲ್ಲೆಯಲ್ಲಿ ಭತ್ತ ಹಾಗೂ ಮುಸುಕಿನ ಜೋಳದ ಬೆಳೆಗಳ ಬಿತ್ತನೆ ಕಾರ್ಯಗಳು ಪ್ರಗತಿಯಲ್ಲಿವೆ. ಒಟ್ಟು ೩೦೫೨೫ ಹೆಕ್ಟೇರ್‌ಗೆ ಇಲ್ಲಿಯವರೆಗೆ ೫೮೬೪ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ/ ನಾಟಿ ಕಾರ್ಯ ಪೂರ್ಣಗೊಂಡಿದೆ.

ಜಿಲ್ಲೆಯ ಕೃಷಿ, ತೋಟಗಾರಿಕೆ ಮತ್ತು ಕಾಫಿ ಬೆಳೆಗಳಿಗೆ ೨೦೨೫ನೇ ಸಾಲಿನ ಮುಂಗಾರು ಹಂಗಾಮಿಗೆ ಸುಮಾರು ೮೮೬೭೭ ಮೆ.ಟನ್ ರಸಗೊಬ್ಬರಗಳ ಅವಶ್ಯಕತೆ ಇದೆಯೆಂದು ಅಂದಾಜಿಸಲಾಗಿದೆ. ಏಪ್ರಿಲ್ ಮಾಹೆಯ ಆರಂಭಿಕ ದಾಸ್ತಾನು (ಕಾಪು ದಾಸ್ತಾನು ಸೇರಿ) ೩೫,೯೨೪ ಮೆ.ಟನ್ ಇದ್ದು, ಜುಲೈ, ೨೮ ರವರೆಗೆ ೫೪೫೨೦ ಮೆ.ಟನ್ ರಸ ಗೊಬ್ಬರ ವಿವಿಧ ತಯಾರಕ ಸಂಸ್ಥೆಗಳಿAದ ಜಿಲ್ಲೆಗೆ ಸರಬರಾಜಾಗಿದೆ. ಒಟ್ಟಾರೆಯಾಗಿ ಇಲ್ಲಿಯವರೆಗೆ ೯೦,೪೪೪ ಮೆ. ಟನ್. ರಸಗೊಬ್ಬರ ಜಿಲ್ಲೆಯ ರೈತರಿಗೆ ಲಭ್ಯವಿದ್ದು, ಸುಮಾರು ೬೦,೧೨೬ ಮೆ. ಟನ್ ರಸಗೊಬ್ಬರವನ್ನು ರೈತರಿಗೆ ವಿತರಣೆ/ ಮಾರಾಟ ಮಾಡಲಾಗಿದೆ. ಬಾಕಿ ೩೦,೩೧೮ ಮೆ. ಟನ್ ರಸಗೊಬ್ಬರ (ಯೂರಿಯಾ ೫೮೫೫ ಮೆಟನ್, ಡಿಎಪಿ-೧೬೪೩ ಮೆಟನ್, ಎಂಓಪಿ ೫೫೨೬ ಮೆ.ಟನ್, ಎನ್‌ಪಿಕೆ ಕಾಂಪ್ಲೆಕ್ಸ್ ೧೬೨೫೦ ಮೆಟನ್ ಹಾಗೂ ಎಸ್?ಸ್ಪಿ ೧೦೪೩ ಮೆಟನ್) ಹಾಲಿ ದಾಸ್ತಾನಿದ್ದು, ಜಿಲ್ಲೆಯಲ್ಲಿ ಯಾವುದೇ ರಸಗೊಬ್ಬರಗಳ ಕೊರತೆಯಿರುವುದಿಲ್ಲ. ಈ ಹಿನ್ನೆಲೆಯಲ್ಲಿ ರೈತರು ರಸಗೊಬ್ಬರಗಳ ಲಭ್ಯತೆ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿರುವುದಿಲ್ಲ ಎಂದು ಕೊಡಗು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಾದ ಚಂದ್ರಶೇಖರ್ ಅವರು ತಿಳಿಸಿದ್ದಾರೆ.

ಎಪಿಸಿಎಂಎಸ್‌ನಲ್ಲಿ ೧೫೦ ಚೀಲ ಲಭ್ಯ

ಗೋಣಿಕೊಪ್ಪಲು : ಗೋಣಿಕೊಪ್ಪಲುವಿನ ಎಪಿಸಿಎಂಎಸ್‌ನಲ್ಲಿ ೧೫೦ ಚೀಲ ಯೂರಿಯಾ ಗೊಬ್ಬರ ಪ್ರಸ್ತುತ ಲಭ್ಯವಿರುವುದಾಗಿ ಸಂಘದ ವ್ಯವಸ್ಥಾಪಕರು ಮಾಹಿತಿ ನೀಡಿದ್ದಾರೆ.

೪೦೦ ಚೀಲ ಲಭ್ಯವಿದೆ

ಗೋಣಿಕೊಪ್ಪಲು : ಗೋಣಿಕೊಪ್ಪ ಪ್ರಾಥಮಿಕ ಗ್ರಾಮಾಂತರ ಕ್ರಷಿ ಪತ್ತಿನ ಸಹಕಾರ ಸಂಘದಲ್ಲಿ ಪ್ರಸ್ತುತ ೪೦೦ ಚೀಲ ಯೂರಿಯಾ ಲಭ್ಯವಿದೆ.

ರೈತರಿಂದ ರಸಗೊಬ್ಬರಕ್ಕೆ ಸಾಕಷ್ಟು ಬೇಡಿಕೆ ಇದ್ದು ಪ್ರಸ್ತುತ ಸಂಘದ ಪ್ರತಿ ಸದಸ್ಯರಿಗೆ ತಲಾ ೨ ಚೀಲ ಗೊಬ್ಬರ ವಿತರಣೆ ಮಾಡಲಾಗುತ್ತಿದೆ ಎಂದು ಸಂಸ್ಥೆಯ ಸಿಇಓ ಮಾಹಿತಿ ತಿಳಿಸಿದ್ದಾರೆ.

ಹಾತೂರು : ೧೨೦೦ ಚೀಲ ಯೂರಿಯಾ ಲಭ್ಯ

ಗೋಣಿಕೊಪ್ಪಲು : ಗೋಣಿಕೊಪ್ಪ ಸಮೀಪದ ಹಾತೂರು ಪ್ಯಾಕ್ಸ್ನಲ್ಲಿ ಪ್ರಸ್ತುತ ೧,೨೦೦ ಚೀಲ ಯೂರಿಯಾ ಲಭ್ಯವಿದೆ.

ರೈತರಿಂದ ಇನ್ನಷ್ಟು ಬೇಡಿಕೆ ಇದ್ದು ಯಾವುದೇ ಕಂಪೆನಿಯು ಯೂರಿಯಾವನ್ನು ಸರಬರಾಜು ಮಾಡುತ್ತಿಲ್ಲ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ.

ಟಾಟ ಕಾಫಿ : ದಾಸ್ತಾನು ಲಭ್ಯವಿಲ್ಲ

ಗೋಣಿಕೊಪ್ಪಲು : ನಗರದ ಟಾಟಾ ಕಾಫಿ ಲಿಮಿಟೆಡ್ ಎಸ್ಟೇಟ್ ಸಫೈ ಡಿವಿಷನ್ ಗೋಣಿಕೊಪ್ಪ ಶಾಖೆಯಲ್ಲಿ ಪ್ರಸ್ತುತ ಗೊಬ್ಬರ ಲಭ್ಯವಿರುವುದಿಲ್ಲ ಎಂದು ಖಾಸಗಿ ಸಂಸ್ಥೆಯ ವ್ಯವಸ್ಥಾಪಕ ರಮೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ದಾಸ್ತಾನು ಲಭ್ಯವಿಲ್ಲ

ಗೋಣಿಕೊಪ್ಪಲು : ವಾಣಿಜ್ಯ ನಗರ ಗೋಣಿಕೊಪ್ಪಲುವಿನ ಖಾಸಗಿ ಸಂಸ್ಥೆಯಾದ ಕೆ.ಸಿ.ಮಂದಣ್ಣ ಅಂಡ್ ಕಂಪನಿಯಲ್ಲಿ ಸದ್ಯದ ಮಟ್ಟಿಗೆ ಪ್ರಸ್ತುತ ದಿನದಲ್ಲಿ ಗೊಬ್ಬರ ಲಭ್ಯವಿರುವುದಿಲ್ಲ, ಮುಂದೆ ಗೊಬ್ಬರ ಬರಲಿದೆ ಎಂದು ಸಂಸ್ಥೆಯ ಮಾಲೀಕರಾದ ಕೆ.ಎಂ. ಅಜಿತ್ ಅಯ್ಯಪ್ಪ ಮಾಹಿತಿ ನೀಡಿದ್ದಾರೆ.

ಕುಶಾಲನಗರ

ಕುಶಾಲನಗರ : ಕುಶಾಲನಗರ ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದಲ್ಲಿ ಇದುವರೆಗೆ ೧೧೮ ಟನ್ ಪ್ರಮಾಣದ ಯೂರಿಯ ಮಾರಾಟ ಆಗಿದೆ. ಸಂಘದ ಗೋಡೌನ್ ನಲ್ಲಿ ಕಳೆದ ಬಾರಿ ಉಳಿಕೆಯಾಗಿದ್ದ ಸುಮಾರು ೨೩೬೩ ಚೀಲ ಯೂರಿಯ ಕುಶಾಲನಗರದ ಸುತ್ತಮುತ್ತ ಹಾರಂಗಿ ಕೂಡಿಗೆ ಮಾದಪಟ್ಟಣ ಚಿಕ್ಕತ್ತೂರು ವ್ಯಾಪ್ತಿಯ ರೈತರಿಗೆ ನೀಡಲಾಗಿದೆ.

ಇದೀಗ ಸುಮಾರು ೪೦ ಚೀಲ ಯೂರಿಯ ತುರ್ತು ಅಗತ್ಯಕ್ಕಾಗಿ ಬಾಕಿ ಇರುವುದಾಗಿ ಸಂಘದ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಕೆ ಜಿ ಜಗದೀಶ್ ಮಾಹಿತಿ ನೀಡಿದ್ದಾರೆ.

ರೈತಾಪಿ ವರ್ಗಗಳಿಂದ ಹೆಚ್ಚಿನ ಬೇಡಿಕೆ ಇದ್ದು ೧೨೦ ಟನ್ ಪ್ರಮಾಣದ ಯೂರಿಯ ಗೊಬ್ಬರಕ್ಕೆ ಕಂಪನಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ. ಕುಶಾಲನಗರ ಸಮೀಪದ ಕೊಪ್ಪ ವ್ಯಾಪ್ತಿಯಲ್ಲಿ ಖಾಸಗಿ ಗೊಬ್ಬರದ ಅಂಗಡಿಗಳಲ್ಲಿ ಕೂಡ ಮಾರಾಟ ನಡೆಯುತ್ತಿದ್ದು ಇದೀಗ ಕೊರತೆ ಕಂಡು ಬರುತ್ತಿದೆ.

ಸೋಮವಾರಪೇಟೆ ಭಾಗದಲ್ಲಿ ಸದ್ಯಕ್ಕಿಲ್ಲ ಯೂರಿಯಾ ಗೊಬ್ಬರ ಸಮಸ್ಯೆ

ಐಗೂರಿನಲ್ಲಿ ಮಾತ್ರ ಬೇಡಿಕೆ ಹೆಚ್ಚು-ದಾಸ್ತಾನು ಕಡಿಮೆ

ಸೋಮವಾರಪೇಟೆ : ಸೋಮವಾರಪೇಟೆ ತಾಲೂಕಿನ ವ್ಯಾಪ್ತಿಯಲ್ಲಿ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಿದ್ದು, ಬೇಡಿಕೆಗೆ ತಕ್ಕಂತೆ ಗೊಬ್ಬರ ಪೂರೈಕೆಯಾಗುತ್ತಿದೆ. ಒಂದೆರಡು ವಿಎಸ್‌ಎಸ್‌ಎನ್‌ಗಳಲ್ಲಿ ಅಲ್ಪ ಪ್ರಮಾಣದ ದಾಸ್ತಾನಿದ್ದು, ಹೆಚ್ಚುವರಿ ಗೊಬ್ಬರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಯೂರಿಯಾ ಗೊಬ್ಬರ ಸಮಸ್ಯೆ ಇಲ್ಲವಾಗಿದೆ.

ಪಟ್ಟಣದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಅಬ್ಬೂರುಕಟ್ಟೆ ಮತ್ತು ಬಳಗುಂದದಲ್ಲಿ ಶಾಖೆ ಹೊಂದಿದ್ದು, ಮುಖ್ಯ ಗೋದಾಮಿನಲ್ಲಿ ೧೫೦೦ ಚೀಲದಷ್ಟು ಯೂರಿಯಾ ದಾಸ್ತಾನಿದೆ. ಸಂಘದಲ್ಲಿ ೮೫೦ ಮಂದಿ ಕೃಷಿಕ ಸದಸ್ಯರಿದ್ದು, ಅವರುಗಳ ಬೇಡಿಕೆಗೆ ತಕ್ಕಂತೆ ಗೊಬ್ಬರ ವಿತರಣೆ ನಡೆಯುತ್ತಿದೆ. ಯೂರಿಯಾ ಗೊಬ್ಬರ ಮಾತ್ರ ಕೇಳುವ ಮಂದಿಗೆ ಅವರು ಕೇಳಿದಷ್ಟು ಗೊಬ್ಬರ ಕೊಡುತ್ತಿಲ್ಲ. ಒಂದು ವೇಳೆ ಹೆಚ್ಚುವರಿ ಗೊಬ್ಬರ ನೀಡಿದರೆ ಮಿಕ್ಸಿಂಗ್‌ಗೆ ಸಮಸ್ಯೆಯಾಗಲಿದೆ. ಅಲ್ಪ ಪ್ರಮಾಣದಲ್ಲಿ ಯೂರಿಯಾ ಮಾತ್ರ ನೀಡುತ್ತಿದ್ದೇವೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ತಿಳಿಸಿದ್ದಾರೆ.

೧೦.೨೬ರ ಜೊತೆಗೆ ಯೂರಿಯಾ, ರಾಕ್-ಪೊಟ್ಯಾಷ್-ಯೂರಿಯಾ, ಪೊಟ್ಯಾಷ್-ಡಿಎಪಿ-ಯೂರಿಯಾ ಮಿಕ್ಸಿಂಗ್ ದೊರೆಯುತ್ತಿದೆ. ಸದಸ್ಯರಲ್ಲದವರಿಗೂ ಸಂಘದಲ್ಲಿ ಗೊಬ್ಬರ ನೀಡಲಾಗುತ್ತಿದೆ. ಅಬ್ಬೂರುಕಟ್ಟೆ, ಬಳಗುಂದದಲ್ಲಿಯೂ ಯೂರಿಯಾ ದಾಸ್ತಾನಿದೆ. ಹೆಚ್ಚುವರಿಯಾಗಿ ೧೦೦೦ ಚೀಲದಷ್ಟು ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಸಲ್ಲಿಸಿದ್ದೇವೆ. ಸದ್ಯಕ್ಕೆ ಯಾವುದೇ ಸಮಸ್ಯೆಯಿಲ್ಲ ಎಂದು ರವೀಂದ್ರ ತಿಳಿಸಿದ್ದಾರೆ.

ಶಾಂತಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲೂ ಬೇಡಿಕೆಗೆ ತಕ್ಕಷ್ಟು ಗೊಬ್ಬರ ಪೂರೈಕೆಯಾಗಿದೆ. ಈಗಾಗಲೇ ೬೦೦ ಬ್ಯಾಗ್ ದಾಸ್ತಾನಿದೆ. ರೈತರಿಗೆ ಗೊಬ್ಬರ ವಿತರಣೆ ಮಾಡುತ್ತಿದ್ದೇವೆ ಎಂದು ಕಾರ್ಯನಿರ್ವಹಣಾಧಿಕಾರಿ ಜೋಯಪ್ಪ ಮಾಹಿತಿ ನೀಡಿದ್ದಾರೆ.

ಐಗೂರು ವಿಎಸ್‌ಎಸ್‌ಎನ್‌ನಲ್ಲಿ ಮಾತ್ರ ಸದ್ಯದ ಪರಿಸ್ಥಿತಿಯಲ್ಲಿ ದಾಸ್ತಾನಿಗಿಂತ ಬೇಡಿಕೆ ಹೆಚ್ಚಿದೆ. ಪ್ರಸ್ತುತ ೨೦೦ ಚೀಲದಷ್ಟು ಮಾತ್ರ ದಾಸ್ತಾನಿದ್ದು, ರೈತರಿಗೆ ಸಾಕಷ್ಟು ಪ್ರಮಾಣದಲ್ಲಿ ಯೂರಿಯಾ ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಕಾರ್ಯನಿರ್ವಹಣಾಧಿಕಾರಿ ಡಿಕ್ಕಿರಾಜ್ ತಿಳಿಸಿದ್ದಾರೆ. ಇದೀಗ ಸೀಸನ್ ಆರಂಭವಾಗಿದ್ದು, ೧೦೦೦ ಚೀಲದಷ್ಟು ಬೇಡಿಕೆ ಇದೆ. ಡೀಲರ್‌ಗಳಿಗೆ ಹೇಳಿ ೧ ತಿಂಗಳಾಗಿದೆ. ಇದೀಗ ೨೦೦ ಚೀಲದಷ್ಟು ಯೂರಿಯಾ ಇದ್ದು, ಇತರ ಗೊಬ್ಬರಗಳ ಮಿಕ್ಸಿಂಗ್‌ಗಾಗಿ ಉಳಿಸಿಕೊಳ್ಳಲಾಗಿದೆ. ಇಲ್ಲದಿದ್ದರೆ ಇಷ್ಟರಲ್ಲಾಗಲೇ ಯೂರಿಯಾ ಖಾಲಿಯಾಗುತ್ತಿತ್ತು ಎಂದು ಮಾಹಿತಿ ನೀಡಿದ್ದಾರೆ.

ಶ್ರೀಮಂಗಲ ವಿಭಾಗ : ಒಂದಷ್ಟು ಕೊರತೆ

ಶ್ರೀಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಪ್ರತ್ಯೇಕವಾದ ಯೂರಿಯಾ ಬೆಳೆಗಾರರಿಗೆ ಲಭ್ಯವಿಲ್ಲ. ಆದರೆ ಕಾಂಪ್ಲೆಕ್ಸ್ ರೂಪದಲ್ಲಿ ಮಿಶ್ರ ಮಾಡಿ ನೀಡುವ ರಸಗೊಬ್ಬರಕ್ಕೆ ಅಗತ್ಯವಾದ ಯೂರಿಯಾ ಲಭ್ಯವಿದೆ ಎಂದು ಸಂಘದ ಮುಖ್ಯ ಕಾರ್ಯನಿರ್ವಣಾಧಿಕಾರಿ. ಜೀವನ್ ಆವರು ತಿಳಿಸಿದ್ದಾರೆ.

ಟಿ. ಶೆಟ್ಟಿಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಯೂರಿಯಾ ರಸ ಗೊಬ್ಬರ ಲಭ್ಯವಿಲ್ಲ. ಭಾನುವಾರ ಗೊಬ್ಬರ ಬರಲಿದೆ ಎಂದು ಸಂಘದ ಮುಖ್ಯ ಕಾರ್ಯನಿರ್ವಣಾಧಿಕಾರಿ ಸೀತಮ್ಮ ಅವರು ತಿಳಿಸಿದ್ದಾರೆ.

ಹುದಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಯಾವುದೇ ಯೂರಿಯಾ ರಸಗೊಬ್ಬರ ಲಭ್ಯವಿಲ್ಲ ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ರಂಡ ತಮ್ಮಯ್ಯ ತಿಳಿಸಿದ್ದಾರೆ.

ಕುಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಯೂರಿಯಾ ಲಭ್ಯವಿಲ್ಲ ಎಂದು ಸಂಘದ ಅಧಿಕಾರಿ ಕೈಬುಲಿರ ನಂಜಪ್ಪ ತಿಳಿಸಿದ್ದಾರೆ.

ನಾಲ್ಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿಯೂ ಯೂರಿಯಾ ಲಭ್ಯವಿಲ್ಲ ಎಂದು ಸಂಘದ ಅಧಿಕಾರಿ ಕೇಚಮಾಡ ಕುಶಾಲಪ್ಪ ಅವರು ತಿಳಿಸಿದ್ದಾರೆ.

ಬಿರುನಾಣಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಪ್ರತ್ಯೇಕವಾಗಿ ಯೂರಿಯ ಬೆಳೆಗಾರರಿಗೆ ಲಭ್ಯವಿಲ್ಲ ಆದರೆ ಕಾಂಪ್ಲೆಕ್ಸ್ ರೂಪದಲ್ಲಿ ರಸ ಗೊಬ್ಬರ ಖರೀದಿಸುವವರಿಗೆ ಯೂರಿಯಾ ದೊರೆಯಲಿದೆ ಎಂದು ಸಂಘದ ಅಧಿಕಾರಿ ಅಯ್ಯಪ್ಪ ಅವರು ತಿಳಿಸಿದ್ದಾರೆ.

ಶ್ರೀಮಂಗಲ ಶ್ರೀರಾಮ ಖಾಸಗಿ ರಸಗೊಬ್ಬರ ಮಾರಾಟ ಮಳಿಗೆಯಲ್ಲಿ ಯೂರಿಯಾ ಲಭ್ಯವಿಲ್ಲ ಎಂದು ಕಚೇರಿ ಮೂಲಗಳು ತಿಳಿಸಿವೆ. ಶ್ರೀಮಂಗಲ ಎಪಿಸಿಎಂಎಸ್‌ಎಲ್‌ನಲ್ಲಿ ಯೂರಿಯಾ ಪ್ರತ್ಯೇಕವಾಗಿ ಲಭ್ಯವಿಲ್ಲ, ಆದರೇ ಎನ್.ಪಿ.ಕೆ. ಯುಕ್ತ ಮಿಶ್ರಣ ರಸಗೊಬ್ಬರ ಖರೀದಿಗೆ ಯೂರಿಯಾ ಲಭ್ಯವಿದೆ ಎಂದು ಸಂಸ್ಥೆಯ ಅಧಿಕಾರಿ ಸುಭಾಶ್ ತಿಳಿಸಿದ್ದಾರೆ.ಚೆಟ್ಟಳ್ಳಿ

ಚೆಟ್ಟಳ್ಳಿ: ಚೆಟ್ಟಳ್ಳಿ ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರ ಸಂಘದಲ್ಲಿ ರಸಗೊಬ್ಬರಕ್ಕೆ ಯಾವುದೇ ಕೊರತೆಯಾಗಿಲ್ಲ. ಪ್ರಸ್ತುತ ಗೋದಾಮಿನಲ್ಲಿ ಯೂರಿಯಾ ೨೦೦ ಚೀಲ ದಾಸ್ತಾನಿದ್ದು ಈವರೆಗೆ ರೈತರಿಗೆ ಯೂರಿಯಾ ಗೊಬ್ಬರ ವಿತರಣೆಗೆ ಯಾವುದೇ ತೊಂದರೆಯಾಗಿಲ್ಲವೆAದು ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ತಿಳಿಸಿದ್ದಾರೆ.