ಮಡಿಕೇರಿ, ಆ. ೭: ವೀಡಿಯೋ ಮಾಡಿ ಬೆದರಿಕೆಯೊಡ್ಡಿದ ಆರೋಪದಡಿ ಕುಶಾಲನಗರದ ಕೆ.ಎಸ್. ಮೂರ್ತಿ ಎಂಬವರ ವಿರುದ್ಧ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಶಾಲನಗರ ಗುಂಡೂರಾವ್ ಬಡಾವಣೆಯ ವಿವೇಕಾನಂದ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಶಂಭುಲಿAಗಪ್ಪ ಅವರು ನೀಡಿರುವ ದೂರಿನಲ್ಲಿ ‘ಏಪ್ರಿಲ್ ೧೬ ರಂದು ಮಧ್ಯಾಹ್ನ ೩ ಗಂಟೆಗೆ ಕಾಲೇಜು ಆವರಣದಲ್ಲಿ ಕಾರಿನಲ್ಲಿ ನಿದ್ರೆ ಮಾಡುತ್ತಿದ್ದ ಸಂದರ್ಭ ಕೆ.ಎಸ್. ಮೂರ್ತಿ ಬಂದು ವೀಡಿಯೋ ಮಾಡಿಕೊಂಡು ನನ್ನ ಸ್ನೇಹಿತರಿಗೆ ಕಳುಹಿಸಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ ವೀಡಿಯೋ ವೈರಲ್ ಮಾಡಿ ಬೆದರಿಕೆಯೊಡ್ಡಿದ್ದು, ತಾ. ೫ ರಂದು ಮತ್ತೊಮ್ಮೆ ಬಂದು ವೀಡಿಯೋ ವೈರಲ್ ಮಾಡುವುದಾಗಿ ಬೆದರಿಕೆಯೊಡ್ಡಿ ಹಣಕ್ಕೆ ಬೇಡಿಕೆ ಇಟ್ಟಿರುವುದಾಗಿಯೂ ಉಲ್ಲೇಖಿಸಿದ್ದಾರೆ.

ದೂರಿನ ಅನ್ವಯ ಬಿಎನ್‌ಎಸ್ ಸೆಕ್ಷನ್ ೩೦೮ (೨), ೩೫೧ (೨) ಅಡಿ ಪ್ರಕರಣ ದಾಖಲಾಗಿದೆ.