ಮಡಿಕೇರಿಯ ಉದ್ಯಮಿ ಅಂಬಿಕಾ ಎಲೆಕ್ಟಾçನಿಕ್ಸ್ ಮಾಲೀಕರಾಗಿದ್ದ ಅಜ್ಜೀನಂಡ ಎ. ಗಣೇಶ್ (೬೮) ಅವರು ತಾ. ೯ ರಂದು ಹೃದಯಾಘಾತದಿಂದ ನಿಧನರಾದರು.
ಕಾಲೇಜು ರಸ್ತೆಯಲ್ಲಿ ಈ ಹಿಂದೆ ಅಂಬಿಕಾ ವೀಡಿಯೋ ಶಾಪ್ ಹೊಂದಿದ್ದ ಅವರು ಕೊಡವ ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ಕೊಡವ ಕ್ಯಾಸೆಟ್‌ಗಳ ಬಿಡುಗಡೆಯ ಹಿಂದೆ ಶ್ರಮಿಸಿದ್ದರು. ಈ ಸಂದರ್ಭದಲ್ಲಿ ಕೊಡವ ಹಾಡುಗಳ ಕ್ಯಾಸೆಟ್‌ನ ಮೂಲಕ ಹಲವಷ್ಟು ಹಾಡುಗಳು ಜನಪ್ರಿಯವಾಗಿದ್ದವು. ಇವರು ಮಡಿಕೇರಿಯ ದಂಡಿನ ಮಾರಿಯಮ್ಮ ದೇವಾಲಯದ ಟ್ರಸ್ಟಿಯೂ ಆಗಿದ್ದರು.
ಮೃತರು ಪತ್ನಿ ಸಮಾಜ ಸೇವಕಿ, ಚೇಂಬರ್ ಆಫ್ ಕಾಮರ್ಸ್ನ ಪ್ರಧಾನ ಕಾರ್ಯದರ್ಶಿ ಮೊಂತಿ ಗಣೇಶ್, ಭಾರತೀಯ ಸೇನೆಯಲ್ಲಿ ಮೇಜರ್ ಆಗಿರುವ ಪುತ್ರಿ ಐಶ್ವರ್ಯ ಸೇರಿದಂತೆ ಇಬ್ಬರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತಾ. ೧೦ ರಂದು (ಇಂದು) ಅಪರಾಹ್ನ ೧೨.೩೦ಕ್ಕೆ ಮಡಿಕೇರಿ ಕೊಡವ ಸಮಾಜದ ರುದ್ರಭೂಮಿಯಲ್ಲಿ ನಡೆಯಲಿದೆ.