ಕೂಡಿಗೆ, ಆ. ೯: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಗ್ಗಡಹಳ್ಳಿ ಗ್ರಾಮದಲ್ಲಿರುವ ದಂಡಿನಮ್ಮ ಕೆರೆಯ ಸರ್ವೆ ಕಾರ್ಯ ಕಂದಾಯ ಇಲಾಖೆಯ ಸೂಚನೆ ಅನ್ವಯ ನಡೆಯಿತು.

ಗ್ರಾಮ ಪಂಚಾಯಿತಿ ವತಿಯಿಂದ ಕೆರೆಗಳನ್ನು ಗುರುತಿಸಲ್ಪಡುವ ಹಿನ್ನೆಲೆಯಲ್ಲಿ ಮತ್ತು ಮಾಸಿಕ ಸಭೆ ಮತ್ತು ಗ್ರಾಮ ಸಭೆಗಳಲ್ಲಿ ದಂಡಿನಮ್ಮ ಕೆರೆಯ ಸರ್ವೆ ನಡೆಸಿ ಅದರ ಅಭಿವೃದ್ಧಿ ಪೂರಕವಾದ ಯೋಜನೆಗಳನ್ನು ರೂಪಿಸುವಂತೆ ಒತ್ತಾಯ ಮಾಡಲಾಗಿತ್ತು.

ಅದರಂತೆ ಗ್ರಾಮ ಪಂಚಾಯಿತಿ ಮಾಸಿಕಸಭೆಯ ನಿರ್ಣಯದ ಅನುಗುಣವಾಗಿ ತಾಲೂಕು ತಹಶೀಲ್ದಾರರ ಕಚೇರಿಗೆ ಪತ್ರ ವ್ಯವಹಾರ ಮಾಡಲಾಗಿ, ಸರ್ವೆ ಇಲಾಖೆ ವತಿಯಿಂದ ದಂಡಿನಮ್ಮ ಕೆರೆಯ ಸರ್ವೆ ಕಾರ್ಯ ಸಾರ್ವಜನಿಕರ ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ನಡೆಯಿತು.

ಮುಂದಿನ ವರದಿ ಆಧಾರದ ಮೇಲೆ ಒತ್ತುವರಿ ತೆರವು ಸೇರಿದಂತೆ ಕೆರೆ ಅಭಿವೃದ್ಧಿಗೆ ಸಂಬAಧಿಸಿದ ಇಲಾಖೆಯ ಮುಖೇನ ಕಾರ್ಯಗತಗೊಳಿಸಲು ಗ್ರಾಮ ಪಂಚಾಯಿತಿ ಮುಂದಾಗಿದೆ.

ಈ ಸಂದರ್ಭ ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಟಿ. ಗಿರೀಶ್ ಕುಮಾರ್, ಸದಸ್ಯರಾದ ಶಿವಕುಮಾರ್, ತಾಲೂಕು ಸರ್ವೆ ಅಧಿಕಾರಿ ಸಿದ್ದರಾಜ್, ಗ್ರಾಮಸ್ಥರಾದ ಪ್ರಕಾಶ್, ಪ್ರವೀಣ್, ಗ್ರಾಮ ಪಂಚಾಯಿತಿ ಕರ ವಸೂಲಿಗಾರ ಅನಿಲ್ ಕುಮಾರ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.