*ಗೋಣಿಕೊಪ್ಪ , ಆ. ೯: ಪೊನ್ನಂಪೇಟೆ ತಾಲೂಕು ಹಿಂದೂ ಜಾಗರಣ ವೇದಿಕೆ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನಾಚರಣೆ ಅಂಗವಾಗಿ ತಾ. ೧೧ ರಂದು ಬೃಹತ್ ವಾಹನ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಹಿಂದೂ ಜಾಗರಣಾ ವೇದಿಕೆ ಸಹ ಸಂಚಾಲಕ್ ಪುತ್ತಾಮನೆ ಅನಿಲ್ ಪ್ರಸಾದ್ ತಿಳಿಸಿದ್ದಾರೆ.
ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಿಂದ ಪೊನ್ನಂಪೇಟೆ ಕೊಡವ ಸಮಾಜದ ವರೆಗೆ ವಾಹನ ಜಾಥಾ ನೆರವೇರಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ಇತ್ತರು.
ಜಿಲ್ಲಾ ಸಂಯೋಜಕ್ ಅಲ್ಲುಮಾಡ ಶರತ್, ತಾಲೂಕು ಸಂಚಾಲಕ್ ಸುಳ್ಳಿಮಾಡ ಸಂಪತ್, ತಾಲೂಕು ಸಹ ಸಂಚಾಲಕ್ ಸತೀಶ, ಪೊನ್ನಂಪೇಟೆ ಹಿರಿಯ ಪ್ರಮುಖ್ ಪುತ್ತಾಮನೆ ಯತೀಶ್, ಕಾನೂನು ಬಾಹಿರ ಚಟುವಟಿಕೆ ನಿರ್ಮೂಲನ ಪ್ರಮುಖ್ ಸುಳ್ಳಿಮಾಡ ರಾಕೇಶ್ ಇದ್ದರು.