ಮಡಿಕೇರಿ, ಆ. ೯: ಪೊನ್ನಂಪೇಟೆ ತಾಲೂಕಿನ ಅತ್ತೂರು ಕೊಲ್ಲಿ ಅರಣ್ಯ ಪ್ರದೇಶಕ್ಕೆ ಅತಿಕ್ರಮಣ ಪ್ರವೇಶ ಮಾಡಿದ ಆರೋಪ ಎದುರಿಸುತ್ತಿರುವ ಹೋರಾಟಗಾರರು ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದರು.

ಮೇ ತಿಂಗಳಿನಲ್ಲಿ ಅತ್ತೂರು ಕೊಲ್ಲಿಯಲ್ಲಿ ಆದಿವಾಸಿಗಳು ನಿವೇಶನಕ್ಕಾಗಿ ನಡೆಸಿದ ಹೋರಾಟಕ್ಕೆ ಚಿತ್ರನಟ ಚೇತನ್ ಅಹಿಂಸ ಸೇರಿದಂತೆ ಹೋರಾಟಗಾರರಾದ ವಿಜಯ್ ಸಿಂಗ್, ರೊನಲ್ಡ್ ಡೇವಿಡ್, ರಾಮರಾಜನ್, ಪತ್ರಕರ್ತೆ ನಿಖಿತ ಜೈನ್, ಸರ್ತಾಜ ಅಲಿ ಅವರುಗಳು ಭಾಗಿಯಾಗಿದ್ದರು.

ಅರಣ್ಯ ಪ್ರದೇಶಕ್ಕೆ ಅತಿಕ್ರಮಣ ಪ್ರವೇಶ ಮಾಡಿ ಆದಿವಾಸಿಗಳಿಗೆ ಪ್ರಚೋದನೆ ನೀಡಿದ ಆರೋಪದಡಿ ಇವರುಗಳ ವಿರುದ್ಧ ಅರಣ್ಯ ಇಲಾಖೆಯಿಂದ ಮೊಕದ್ದಮೆ ದಾಖಲಾಗಿತ್ತು. ನಾಗರಹೊಳೆ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರ ಸೂಚನೆ ಮೇರೆಗೆ ಆಗಮಿಸಿದ ಇವರುಗಳು ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ.