ವೀರಾಜಪೇಟೆ ಕಾವೇರಿ ಕಾಲೇಜು ವಿದ್ಯಾರ್ಥಿಗಳಿಗೆ ಕೆಸರುಗದ್ದೆ ಕ್ರೀಡೆ

ವೀರಾಜಪೇಟೆ, ಆ. ೯: ವರ್ಷಕ್ಕೆ ಒಮ್ಮೆಯಾದರೂ ವಿದ್ಯಾರ್ಥಿಗಳು ಕೃಷಿ ಭೂಮಿಯ ಅನುಭವ ಪಡೆಯಬೇಕು. ಆಧುನಿಕ ಜೀವನ ಶೈಲಿಯಿಂದ, ಕೃಷಿ ಭೂಮಿಯಿಂದ ದೂರ ಉಳಿದ ಯುವ ಜನತೆ ಒಂದು ದಿನವಾದರೂ ಕೃಷಿ ಭೂಮಿಯ ಸಂಪರ್ಕಕ್ಕೆ ಬಂದು ರೈತಾಪಿ ಬದುಕಿನ ಅನುಭವ ಪಡೆಯಬೇಕು ಎಂದು ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್ ಸಲ್ದಾನ ಅಭಿಪ್ರಾಯಪಟ್ಟರು.

ವೀರಾಜಪೇಟೆ ಕಾವೇರಿ ಪದವಿ ಕಾಲೇಜಿನ ವತಿಯಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ಬಿಟ್ಟಂಗಾಲದ ನಿವೃತ್ತ ಪೊಲೀಸ್ ಉನ್ನತಾಧಿಕಾರಿ ಬಿ.ಡಿ. ಮಂದಪ್ಪ ಅವರ ಗದ್ದೆಯಲ್ಲಿ ಆಯೋಜಿಸಲಾಗಿದ್ದ ಕ್ರೀಡಾಕೂಟವನ್ನು ಉದ್ದೇಶಿಸಿ ಮಾತನಾಡಿದ ಅವರು ಇತ್ತೀಚಿನ ವರ್ಷದಲ್ಲಿ ಯುವಜನತೆ ಕೃಷಿ ಭೂಮಿಯಿಂದ ದೂರ ಸರಿಯುತಿದ್ದು, ಹಿಂದಿನ ಕಾಲದಲ್ಲಿ ಕೃಷಿ ಭೂಮಿಯ ಜೊತೆಗೆ ಹೊಂದಿದ್ದ ಅವಿನಾಭಾವ ಸಂಬAಧದಿAದ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳು ಕೃಷಿ ಭೂಮಿಯಿಂದ ವಿಮುಖರಾಗುತ್ತಿದ್ದಾರೆ.

ವರ್ಷದಲ್ಲಿ ಒಂದು ಬಾರಿಯಾದರೂ ವಿದ್ಯಾರ್ಥಿಗಳು ಕೃಷಿ ಭೂಮಿಯ ಅನುಭವ ಪಡೆಯಬೇಕು. ವಿದ್ಯಾರ್ಥಿಗಳು ತಮ್ಮ ಪ್ರತಿನಿತ್ಯದ ಮನೆ ಹಾಗೂ ಶಿಕ್ಷಣದ ಜಂಜಾಟವನ್ನು ಮರೆತು ಪ್ರಕೃತಿಯ ಮಧ್ಯೆ ಕೃಷಿಭೂಮಿ, ನೀರು, ಕೆಸರು, ಮಳೆ ಮುಂತಾದವುಗಳ ಅನುಭವವನ್ನು ಪಡೆದು ಸಂಭ್ರಮಿಸಿ ದೈಹಿಕ ಹಾಗೂ ಮಾನಸಿಕವಾಗಿ ಪುನಶ್ಚೇತನಗೊಳಿಸಲು ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದರು.

ಕಾಲೇಜಿನ ಐ.ಕ್ಯೂ.ಎ.ಸಿ. ಸಂಚಾಲಕಿ ಪ್ರಿಯ ಮುದ್ದಪ್ಪ ಮಾತನಾಡಿ, ಕೃಷಿಯು ನಮಗೆ ಪೂರ್ವಜರಿಂದ ಬಳುವಳಿಯಾಗಿ ಬಂದ ಒಂದು ಉಡುಗರೆ. ಆದರೆ ಇತ್ತೀಚಿನ ಸಮಯದಲ್ಲಿ ಆಧುನಿಕ ಬದುಕಿನ ಜಂಜಾಟದಲ್ಲಿ ಕಣ್ಮರೆಯಾಗುತ್ತಿರುವ ಈ ಕೃಷಿ ಬದುಕಿನ ಸಂಸ್ಕöÈತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಕ್ರೀಡಾಕೂಟ ಆಯೋಜಿಸಲಾಗಿದೆ. ಕೃಷಿ ಭೂಮಿಯೊಂದಿಗೆ ವಿದ್ಯಾರ್ಥಿಗಳ ಒಡನಾಟವನ್ನು ಹೆಚ್ಚಿಸಲು ಹಾಗೂ ವಿದ್ಯಾರ್ಥಿಗಳ ನಡುವೆ ಪರಸ್ಪರ ಸಹಕಾರ, ಒಗ್ಗಟ್ಟು, ಕ್ರೀಡಾ ಮನೋಭಾವನೆ ಹೆಚ್ಚಿಸುವುದರೊಂದಿಗೆ ಒಂದು ದಿನವಾದರು ಕೃಷಿ ಭೂಮಿಯ ಆಹ್ಲಾದ ಪಡೆಯುವಂತೆ ಮಾಡಲು ಕ್ರೀಡಾಕೂಟ ಆಯೋಜಿಸಲಾಗಿದ್ದು ಇದೆ ರೀತಿ ಮುಂದಿನ ವರ್ಷಗಳಲ್ಲಿ ವಿದ್ಯಾರ್ಥಿಗಳಿಗೆ ಇನ್ನು ಹೆಚ್ಚಿನ ಕ್ರೀಡೆಯನ್ನು ಆಯೋಜಿಸಲಾಗುವುದು ಎಂದರು.

ವಿದ್ಯಾರ್ಥಿಗಳಿಗೆ ಕೆಸರುಗದ್ದೆಯಲ್ಲಿ ಓಟದ ಸ್ಪರ್ಧೆ, ಹಗ್ಗ ಜಗ್ಗಾಟ, ಫುಟ್ಬಾಲ್, ಥ್ರೋಬಾಲ್ ಹಾಗೂ ಟ್ರೆಷರ್ ಹಂಟ್ ಕ್ರೀಡೆಗಳನ್ನು ನಡೆಸಲಾಯಿತು. ಹುಡುಗರ ವಿಭಾಗ : ಓಟದ ಸ್ಪರ್ಧೆಯಲ್ಲಿ ಓಶಿನ್ ಬೋಪಯ್ಯ ಪ್ರಥಮ, ಭವಿಷ್ ದ್ವಿತೀಯ, ಲಿಖಿತ್ ತೃತೀಯ ಸ್ಥಾನ ಪಡೆದರು. ಹಗ್ಗ ಜಗ್ಗಾಟದಲ್ಲಿ ಕಪುö್ಪ ತಂಡ ಪ್ರಥಮ, ಹಸಿರು ತಂಡ ದ್ವಿತೀಯ ಸ್ಥಾನ ಪಡೆಯಿತು. ಫುಟ್ಬಾಲ್‌ನಲ್ಲಿ ಹಸಿರು ತಂಡ ಪ್ರಥಮ, ಕೆಂಪು ತಂಡ ದ್ವಿತೀಯ ಸ್ಥಾನ ಪಡೆಯಿತು. ಟ್ರಫರ್ ಹಂಟ್ ವಿಭಾಗದಲ್ಲಿ ಕಪುö್ಪ ತಂಡ ಪ್ರಥಮ, ಕೆಂಪು ತಂಡ ದ್ವಿತೀಯ ಸ್ಥಾನವನ್ನು ಪಡೆಯಿತು.

ಹುಡುಗಿಯರ ವಿಭಾಗ: ಓಟದ ಸ್ಪರ್ಧೆಯಲ್ಲಿ ಶಮ್ಲಾ ಪ್ರಥಮ, ರೀಷ್ಮ ದ್ವಿತೀಯ, ಹೇಮಾವತಿ ತೃತೀಯ ಸ್ಥಾನ ಪಡೆದರು. ಹಗ್ಗ ಜಗ್ಗಾಟದಲ್ಲಿ ಕಪುö್ಪ ತಂಡ ಪ್ರಥಮ, ಹಸಿರು ತಂಡ ದ್ವಿತೀಯ ಸ್ಥಾನ ಪಡೆಯಿತು. ಥ್ರೋಬಾಲ್‌ನಲ್ಲಿ ಹಸಿರು ತಂಡ ಪ್ರಥಮ, ನೀಲಿ ತಂಡ ದ್ವಿತೀಯ ಸ್ಥಾನ ಪಡೆಯಿತು. ಟ್ರೆಷರ್ ಹಂಟ್ನಲ್ಲಿ ನೀಲಿ ತಂಡ ಪ್ರಥಮ, ಕಪುö್ಪ ತಂಡ ದ್ವಿತೀಯ ಸ್ಥಾನ ಪಡೆಯಿತು. ಕ್ರೀಡಾಕೂಟದ ಸಂದರ್ಭ ಕಾಲೇಜಿನ ಉಪನ್ಯಾಸಕ ವರ್ಗ, ಆಡಳಿತಾತ್ಮಕ ಸಿಬ್ಬಂದಿಗಳು ಎಲ್ಲರೂ ಕ್ರೀಡೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.

ವಸತಿ ಶಾಲೆಯಲ್ಲಿ ರೇಂಜರ್ ದಿನ ಆಚರಣೆ

ಕೂಡಿಗೆ, ಆ. ೯: ಕೂಡಿಗೆ ಕೃಷಿ ಕ್ಷೇತ್ರದ ಆವರಣದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿಶ್ವ ರೇಂಜರ್ ದಿನದ ಅಂಗವಾಗಿ ಅರಣ್ಯ ತರಬೇತಿ ಕೇಂದ್ರ, ಕುಶಾಲನಗರ ಇವರ ವತಿಯಿಂದ ವಿವಿಧ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿತು.

ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಹಾಗೂ ಜ್ಞಾಪಕ ಶಕ್ತಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮೊದಲಿಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಶಾಲೆಯ ಪ್ರಾಂಶುಪಾಲರು, ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿಗಳು ಸೇರಿ ಶಾಲಾ ಆವರಣದಲ್ಲಿ ಹಣ್ಣಿನ ಗಿಡಗಳನ್ನು ನೆಡಲಾಯಿತು.

ನಂತರ ವೇದಿಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಅರಣ್ಯ ಮಹಾ ವಿಶ್ವವಿದ್ಯಾಲಯ ಪೊನ್ನಂಪೇಟೆಯ ಪ್ರಾಧ್ಯಾಪಕರಾದ ಡಾ. ಜಡೇಗೌಡ ನೆರವೇರಿಸಿದರು. ಶಾಲೆಯ ಆವರಣದಲ್ಲಿ ಅತ್ಯುತ್ತಮವಾದ ಉದ್ಯಾನವನವನ್ನು ಈಗಾಗಲೇ ನಿರ್ಮಿಸಲಾಗಿದೆ.

ಈ ಜಾಗದಲ್ಲಿ ಹೆಚ್ಚೆಚ್ಚು ಗಿಡಗಳನ್ನು ಬೆಳೆಸಿ ಪೋಷಿಸಲು ತಮ್ಮ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ಅವರು ಭರವಸೆ ನೀಡಿದರು.

ಗೌರವಾಧ್ಯಕ್ಷ ಶ್ರೀನಿವಾಸ್ ನಾಯಕ್, ಸಹಾಯ ಅರಣ್ಯ ಸಂರಕ್ಷಣಾಧಿಕಾರಿಗಳು (ಪ್ರಬಾರ), ಅರಣ್ಯ ತರಬೇತಿ ಕೇಂದ್ರ, ಕುಶಾಲನಗರ ಇವರು ಕಾರ್ಯಕ್ರಮ ವನ್ನು ಉದ್ದೇಶಿಸಿ ಮಕ್ಕಳಿಗೆ ಪರಿಸರದ ಮಹತ್ವದ ಬಗ್ಗೆ ತಿಳಿಸಿದರು.

ಮುಖ್ಯ ಅತಿಥಿ, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲೆ ಭಾರತಿ ಮಾತಾನಾಡಿ, ಮಕ್ಕಳು ಗಿಡ ಮರಗಳನ್ನು ತಮ್ಮ ತಂದೆ ತಾಯಿಯಂತೆ ಪ್ರೀತಿಸಿ, ಪೋಷಿಸಬೇಕು. ಪರಿಸರವನ್ನು ಸಂರಕ್ಷಿಸಿದರೆ ನಮ್ಮ ಮುಂದಿನ ಪೀಳಿಗೆಗೂ ಅದು ಲಭ್ಯವಿರುತ್ತದೆ. ಇಲ್ಲವಾದರೆ ಭೂಮಿ ಬರಡಾಗುತ್ತದೆ. ಎಂದರು. ಕಲಿಯಲು ಶಿಕ್ಷಕರು, ಶಾಲೆಯ ವ್ಯವಸ್ಥೆಯ ಜೊತೆಗೆ ಉತ್ತಮವಾದ ಪರಿಸರವು ಸಹ ಪಾತ್ರ ವಹಿಸುತ್ತದೆ. ಪರಿಸರ ಸಂರಕ್ಷಣೆ ಬಹಳ ಮುಖ್ಯ, ಏಕೆಂದರೆ ಇದು ನಮ್ಮ ಜೀವನದ ಗುಣಮಟ್ಟ ಮತ್ತು ಭವಿಷ್ಯದ ಪೀಳಿಗೆಗೆ ಸಂಬAಧಿಸಿದೆ, ವಿದ್ಯಾರ್ಥಿಗಳು ಶಾಲೆಯಲ್ಲಿ ಪ್ಲಾಸ್ಟಿಕ್ ಅನ್ನು ಹೆಚ್ಚಾಗಿ ಬಳಸಬಾರದು ಎಂದು, ಮುಂದೆ ಬರುವ ಗಣೇಶ ಚತುರ್ಥಿ ಸಂದರ್ಭ ರಾಸಾಯನಿಕ ಬಣ್ಣ ಇರುವ ಗಣೇಶನ ಮೂರ್ತಿಗಳನ್ನು ಬಳಸಬಾರದು. ಮಣ್ಣಿನ ಗಣೇಶನ ಮೂರ್ತಿಗಳನ್ನು ಬಳಸಬೇಕು. ಇದರಿಂದ ನಮ್ಮ ನದಿ ಕೆರೆಗಳು ಕಲುಷಿತಗೊಳ್ಳುವುದಿಲ್ಲ. ನಮ್ಮ ಪರಿಸರದ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ತಮ್ಮ ಮನದಾಳದ ನುಡಿಗಳನ್ನು ಹೇಳಿದರು.

ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಕೊಟ್ರೇಶ್ ಕೆ, ರವಿಚಂದ್ರ ಎಂ, ನಳಿನಿ ಕೆ.ಕೆ, ರಘು, ಶಿಕ್ಷಕರಾದ ದಿನೇಶ್ ಅರ್ಚಾರಿ, ಅಮೃತ ಕೆ.ವಿ. ನಾಗೇಂದ್ರ, ಮಂಜು, ದೊಡ್ಡಯ್ಯ, ನಳಿನಿ, ಕವಿತಾ, ಪರಿಣಾಕ್ಷಿ, ತ್ರಿವೇಣಿ, ಮೀನಾ ಜಗದೀಶ್ ಉಪಸ್ಥಿತರಿದ್ದರು. ಅರಣ್ಯ ಇಲಾಖೆಯ ವತಿಯಿಂದ ನಡೆದ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಣೆ ಮಾಡಲಾಯಿತು.